ಐಎಎಸ್ ಅಧಿಕಾರಿ ವಿ. ಶಂಕರ್.. 1985ರ ಕೆ.ಎಸ್.ಎಸ್ ಅಧಿಕಾರಿ.. ಹಲವು ಕಡೆ ಅಸಿಸ್ಟೆಂಟ್ ಕಮೀಷನರ್ ಆಗಿ.. ಎರಡು ಸಲ ಮೂಡಾ ಕಮೀಷನರ್ ಆಗಿ.. ಮೂರು ಜಿಲ್ಲೆಗಳಿಗೆ ಜಿಲ್ಲಾಧಿಕಾರಿಯಾಗಿ.. ಹಲವು ಇಲಾಖೆಗಳನ್ನು ದಕ್ಷತೆಯಿಂದ ನಿಷ್ಕಳಂಕದಿಂದ ನಿಭಾಯಿಸಿದ ಅಧಿಕಾರಿ.. ಅನುಭವಿ ಅಧಿಕಾರಿ.. ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಅಧಿಕಾರಿ ಅನ್ನೋದನ್ನ ಎಲ್ಲಾ ಪಕ್ಷಗಳ ನಾಯಕರೂ ಒಪ್ಪುತ್ತಾರೆ.. ಇಂಥಾ ಶಂಕರ್ ಅವರನ್ನೇ ಅಂದು ಸಿದ್ದರಾಮಯ್ಯ 2013ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದ್ರು.. ಬೆಂಗಳೂರು ಗ್ರಾಮಾಂತರದ ಜನ ದೂರದಿಂದ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಬರೋದಕ್ಕೆ ಕಷ್ಟವಾಗುತ್ತೆ ಅನ್ನೋದನ್ನ ಮನಗಂಡ ಶಂಕರ್ ಅವರು ಜಿಲ್ಲಾಡಳಿತವನ್ನು ದೇವನಹಳ್ಳಿಗೆ ವರ್ಗಾಯಿಸಿದ್ದರು.. ಈ ಕಾರಣಕ್ಕಾಗಿಯೇ ಬೆಂಗಳೂರು ಗ್ರಾಮಾಂತರದ ಜನ ಇವತ್ತಿಗೂ ವಿ. ಶಂಕರ್ ಅವರನ್ನು ನೆನಪಿಸಿಕೊಳ್ಳುತ್ತಾರೆ.. ಸಿದ್ದರಾಮಯ್ಯರಿಗೆ ಯುಕ್ತಿ ಶಂಕರ್ ಆಗಿದ್ರೆ, ಶಕ್ತಿ ಕೆಂಪಯ್ಯ ಆಗಿದ್ರು..
2006ರಲ್ಲಿ ಕುಮಾರಸ್ವಾಮಿ ಮೊದಲ ಸಲ ಸಿಎಂ ಆಗಿದ್ದಾಗ ಬೆಂಗಳೂರಿನಾದ್ಯಂತ ಭೂಗಳ್ಳರು ಒತ್ತುವರಿ ಮಾಡಿಕೊಂಡಿರೋ ಭೂಮಿಯ ಸಂಪೂರ್ಣ ವರದಿ ನೀಡುವಂತೆ ಎ.ಟಿ ರಾಮಸ್ವಾಮಿ ನೇತೃತ್ವದ ಸದನ ಸಮಿತಿ ರಚಿಸಿದ್ದರು.. ಆ ವರದಿಯಲ್ಲಿ 11,000 ಎಕರೆ ಭೂಮಿ ಒತ್ತುವರಿ ಆಗಿದೆ ಅನ್ನೋದು ವರದಿಯಲ್ಲಿತ್ತು.. ರಾಮಸ್ವಾಮಿಯವರು ನೀಡಿದ್ದ ವರದಿ ಧೂಳು ಹಿಡಿದು ಕೂತಿತ್ತು.. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೊದಲ ಸಲ ಪ್ರಗತಿಪರರ ಭೇಟಿಗೆ ಮುಂದಾದ್ರು.. 2014ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೈಸ್ವಾಮಿ ಸಿದ್ದರಾಮಯ್ಯ ಅವರಿಗೆ ಒಂದು ಮನವಿ ಮಾಡಿದ್ರು.. ಭೂಗಳ್ಳರಿಂದ ಸರ್ಕಾರಿ ಭೂಮಿ ತೆರವುಗೊಳಿಸುವುದಕ್ಕೆ ದಕ್ಷ ಜಿಲ್ಲಾಧಿಕಾರಿ ನೇಮಕ ಮಾಡುವಂತೆ ಕೋರಿದ್ರು..
ಇದೇ ಸಂದರ್ಭ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ವಿ. ಶಂಕರ್ ಅವರು ಪೊಲೀಸರಿಗೂ ತಿಳಿಸದೇ, ಪೊಲೀಸ್ ಇಲಾಖೆಯ ರಕ್ಷಣೆಯನ್ನೂ ಪಡೆಯದೇ, ತಾವೇ ಖುದ್ದಾಗಿ ಮರಳು ದಂಧೆ ಜಾಗಗಳಿಗೆ ಹೋಗಿ ಸೀಜ್ ಮಾಡ್ತಿದ್ರು.. ಈ ಮೂಲಕ ಮರಳು ದಂಧೆಗೆ ಬ್ರೇಕ್ ಹಾಕಿದ್ರು.. ರಾತ್ರೋರಾತ್ರಿ ಮರಳುಗಳ್ಳರ ನಿದ್ದೆ ಕೆಡೆಸಿದ್ರು.. ಈ ದಿಟ್ಟತನವನ್ನು ಮತ್ತು ಕೆಚ್ಚೆದೆಯನ್ನು ಕಂಡು 2014ರಲ್ಲಿ ವಿ. ಶಂಕರ್ ಅವರನ್ನ ಸಿದ್ದರಾಮಯ್ಯ ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ರು.. ಎಟಿ ರಾಮಸ್ವಾಮಿಯವರ ವರದಿಯನ್ನು ಶಂಕರ್ ಅವರ ಕೈಗಿಟ್ಟು ಕಾರ್ಯಾಚಾರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು.. ನಾವೆಲ್ಲರೂ ಡಾ. ವಿಷ್ಣುವರ್ಧನ್ರ ಹಲೋ ಡ್ಯಾಡಿ ಅನ್ನೋ ಸಿನಿಮಾ ನೋಡಿರ್ತೀವಿ.. ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯಾಗಿ ವಿಷ್ಣುವರ್ಧನ್ ಭೂಗಳ ವಿರುದ್ಧ ಕಾದಾಡಿ ಸರ್ಕಾರಿ ಭೂಮಿಯನ್ನು ತೆರವುಗೊಳಿಸುತ್ತಾರೆ.. ಹಲೋ ಡ್ಯಾಡಿ ಸಿನಿಮಾದ ಸನ್ನಿವೇಶಗಳನ್ನೂ ಮೀರಿಸುವಂತೆ ನಿಜ ಜೀವನದಲ್ಲೂ ಜಿಲ್ಲಾಧಿಕಾರಿಯಾಗಿ ವಿ. ಶಂಕರ್ ಅವರೂ ಸಹ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು.. ಮಾಧ್ಯಮಗಳು ಶಂಕರ್ ಅವರಿಗೆ ಡೆಮಾಲಿಷನ್ ಡಿಸಿ ಅನ್ನೋ ಬಿರುದು ನೀಡಿದ್ದರು..
ವಿ. ಶಂಕರ್
ವಿ. ಶಂಕರ್ ಅವರು ಜವಾಬ್ಧಾರಿ ವಹಿಸಿದ ಕೂಡಲೇ ನಿರೀಕ್ಷೆಗೂ ಮೀರಿ ಒತ್ತುವರಿ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು.. 11,000 ಎಕರೆ ಬದಲಿಗೆ ಸರ್ಕಾರಕ್ಕೆ 18,868 ಎಕರೆ ಭೂಮಿಯನ್ನು ತೆರವು ಮಾಡಿಸಿದ್ದರು.. 2015ರಲ್ಲಿ ಖುದ್ದು ಪ್ರಧಾನಿ ಮೋದಿಯವರು ಶಂಕರ್ ಅವರ ಈ ಸಾಧನೆಯನ್ನು ಗುರ್ತಿಸಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.. ಶಂಕರ್ ಅವರ ರೀತಿಯಲ್ಲೇ ದೇಶದ ನಾನಾ ನಗರಗಳಲ್ಲಿ ಒತ್ತುವರಿ ಆಗಿರೋ ಸರ್ಕಾರಿ ಭೂಮಿಯನ್ನು ತೆರವುಗೊಳಿಸೋ ಕಾರ್ಯ ಆಗಬೇಕು ಅಂತ್ಲೂ ಹೇಳಿದ್ರು ಪ್ರಧಾನಿ ಮೋದಿ.. 2014ರಲ್ಲಿ ವಿಜಯ ಕರ್ನಾಟಕ ಕೊಡ ಮಾಡುವ ವರ್ಷದ ವ್ಯಕ್ತಿ ಪ್ರಶಸ್ತಿಗೂ ವಿ.ಶಂಕರ್ ಭಾಜನರಾದರು.. ಸೆಪ್ಟೆಂಬರ್ 7, 2022ರಂದು ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 18,868 ಎಕರೆ ಭೂಮಿಯನ್ನು ಭೂಗಳ್ಳರಿಂದ ತೆರವುಗೊಳಿಸಿದ್ದು.. ತಮ್ಮ ಅಂದಿನ ಸರ್ಕಾರದ ಸಾಧನೆ ಅಂತ ಬರೆದುಕೊಂಡಿದ್ರು.. ಅಸಲಿಗೆ ಅವತ್ತಿನ ತೆರವು ಪ್ರಕರಣದ ಸಂಪೂರ್ಣ ಕ್ರೆಡಿಟ್ ವಿ. ಶಂಕರ್ ಅವರಿಗೆ ಸಲ್ಲುತ್ತದೆ..
ಪ್ರಧಾನಮಂತ್ರಿ ವಿಶೇಷ ಪ್ರಶಸ್ತಿ ನೀಡಲು ಆಯ್ಕೆ ಸಮಿತಿಗೆ ಶಂಕರ್ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು.. ಆದರೇ ಸಿದ್ದರಾಮಯ್ಯರ ಜೊತೆಗಿನ ಆತ್ಮೀಯ ಬಾಂಧವ್ಯಕ್ಕೆ ಚ್ಯುತಿ ಬರಬಾರದು ಅಂತ ಖುದ್ದು ಶಂಕರ್ ಅವರೇ ನಯವಾಗಿ ಪ್ರಧಾನಮಂತ್ರಿ ಪ್ರಶಸ್ತಿಯನ್ನೂ ತಿರಸ್ಕರಿಸಿದ್ದರು.. ವಿಶೇಷ. ಅಂದ್ರೆ ಒತ್ತುವರಿ ಭೂಮಿಯನ್ನು ತೆರವು ಮಾಡಿಸಿದ್ದ ಸಾಧನೆಯನ್ನು ಗೌರವಿಸಿ ಸ್ವಾತಂತ್ರ್ಯ ಹೋರಾಟಗಾರ ದೊರೈಸ್ವಾಮಿಯವರೇ ವಿ. ಶಂಕರ್ ಅವರ ಕಚೇರಿಗೆ ಬಂದು, ಶಂಕರ್ ಅವರನ್ನ ಸನ್ಮಾನಿಸಿ ಆಶೀರ್ವಾದ ಮಾಡಿದ್ದರು.. ಇದೇ ಸಂದರ್ಭವೇ ಧ್ವನಿ ಇಲ್ಲದ ಅದೆಷ್ಟೋ ಸಮುದಾಯಗಳ ಸಂಘ ಸಂಸ್ಥೆಗಳಿಗೆ ನಿವೇಶನ ಕೊಡಿಸಿದ್ರು.. ಬಡವರಿಗೆ ಒಂದು ಲಕ್ಷ ನಿವೇಶನ ಕೊಡಿಸಿದ ಕೀರ್ತಿ ಕೂಡ ಇದೇ ವಿ. ಶಂಕರ್ ಅವರಿಗೆ ಸಲ್ಲಬೇಕು..
ಇನ್ನು, ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಆಮ್ ಆದ್ಮಿ ಪಕ್ಷ ಪಕ್ಷದ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿ. ಶಂಕರ್ ಅವರಿಗೆ ಒಂದು ಆಫರ್ ನೀಡಿದ್ರು.. ನಿಮ್ಮ ಸೇವಾ ಅವಧಿ ಮುಗಿದ ಮೇಲೆ ನಮ್ಮ ಪಕ್ಷ ಸೇರಿಕೊಳ್ಳಿ ಅಂತಲೂ ಆಹ್ವಾನಿಸಿದ್ರು.. ಇವತ್ತು ಸಾಹಸಸಿಂಹ ವಿಷ್ಣುವರ್ಧನ್ರ ಸ್ಮಾರಕದ 10 ಗುಂಟೆ ಜಾಗ ಉಳಿದಿದೆ ಎಂದರೇ ಅದಕ್ಕೂ ಕಾರಣ ವಿ. ಶಂಕರ್.. ಅವತ್ತು ಡಿಸಿ ಆಗಿ ಶಂಕರ್ ಅವರು ಅಭಿಮಾನ್ ಸ್ಟುಡಿಯೋ ಸರ್ಕಾರಿ ಸ್ವತ್ತು ಅನ್ನೋದನ್ನ ಆದೇಶಿಸದೇ ಹೋಗಿದ್ದರೇ ಇವತ್ತು ಆ ಜಾಗವೂ ಉಳಿಯುತ್ತಿರಲಿಲ್ಲ.. ಇದೇ ಶಂಕರ್ ಅವರ ಅಧಿಕಾರದ ಅವಧಿಯಲ್ಲೇ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆರಂಭಿಸಿರುವ ಡಾ.ರಾಜಕುಮಾರ್ ಅಧ್ಯಯನ ಪೀಠ ವಿಸ್ತರಣ ಕೇಂದ್ರಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡಿದ್ದರು. ಯಲಹಂಕ ಹೋಬಳಿಯ ಬೆಳ್ಳಳ್ಳಿ ಗ್ರಾಮದ ಹಜ್ ಭವನದ ಹತ್ತಿರದ ಸರ್ವೇ ನಂಬರ್ 55ರಲ್ಲಿ 2 ಎಕರೆ ಜಮೀನು ಮಂಜೂರು ಮಾಡಿದ್ರು. 2019ರಲ್ಲಿ ಜಮೀನಿನ ಪಹಣಿ ಕೂಡ ಆಗಿದೆ.
ನರೇಂದ್ರ ಮೋದಿ
ಪ್ರಧಾನ ಮಂತ್ರಿ
ಸಿದ್ದರಾಮಯ್ಯ
ಮುಖ್ಯಮಂತ್ರಿ
ವಿ. ಶಂಕರ್
ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ.
ವಾರ್ತೆ
ವಾರ್ತೆಗಳು ಮತ್ತು ಬರಹಗಳು
ಸುದ್ದಿ ಕೇಂದ್ರದಿಂದ ಇತ್ತೀಚಿನ ಮಾಹಿತಿ
ಭೂಮಿ ಒತ್ತುವರಿ ತೆರವು ಸ್ಥಳಕ್ಕೆ ಭೇಟಿ
ವಿಕ ಸುದ್ದಿಲೋಕ ಆನೇಕಲ್ತಾಲೂಕಿನ ಅತ್ತಿಬೆಲೆ ಸುತ್ತ ತೆರವುಗೊಳಿಸಿದ್ದ ಒತ್ತುವರಿ ಸ್ಥಳಗಳಿಗೆ ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ಪರಿಶೀಲಿಸಿದರು.69 ಎಕರೆ ಪ್ರದೇಶದ ಅತ್ತಿಬೆಲೆ…
6.21 ಎಕರೆ ಭೂಮಿ1.20 ಎಕರೆ ಒತ್ತುವರಿ ಮಾಡಿಕೊಂಡಿದ್ದ ರವಿಶಂಕರ್ ಗುರೂಜಿ ವಿದ್ಯಾಮಂದಿರ
ಕಾಚಮಾರನಹಳ್ಳಿಯಲ್ಲಿ ರವಿಶಂಕರ್ ಗುರೂಜಿ ವಿದ್ಯಾಮಂದಿರದಿಂದ ಒತ್ತುವರಿಯಾಗಿದ್ದ ಸರ್ಕಾರಿ
ಅಭಿಮಾನದಲ್ಲೇ ವಿಷ್ಣು ಸ್ಮಾರಕ
ಅಭಿಮಾನ್ ಸ್ಟುಡಿಯೋದ ಬಳಿ 2 ಎಕರೆಯಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುವ ಕುರಿತು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್…
₹ 1,500 ಕೋಟಿ ಮೌಲ್ಯದ ಆಸ್ತಿ ವಶ
ಕರೆಯ ಒತ್ತುವರಿದಾರರ ಮೇಲೆ ಗದಾ ಪ್ರಹಾರ ನಡೆಸಿದ ನಗರ ಜಿಲ್ಲಾಡಳಿತ, ಸುಮಾರು ₹1,500 ಕೋಟಿ ಮೌಲ್ಯದ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ…
ಕಣ್ಣೆದುರೇ ಕನಸಿನ ಸೌಧ ಕುಸಿದು ಬಿದ್ದಾಗ…
ಸಾರಕ್ಕಿಯಲ್ಲಿ ಒಂದೇ ದಿನ 200ಕ್ಕೂ ಅಧಿಕ ಕಟ್ಟಡ ನೆಲಸಮ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯರ ತೀವ್ರ ಆಕ್ರೋಶ
ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ
ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ ಕೆರೆ, ಅರಣ್ಯ ಮತ್ತಿತರ ಅತಿಕ್ರಮ ವಿರುದ್ಧ ಭಾರೀ ಕಾರ್ಯಾಚರಣೆ ಒತ್ತುವರಿ…
ಅಲ್ಲಾಳಸಂದ್ರ ಕೆರೆಗೆ ಮುತ್ತಿ
ಅಲ್ಲಾಳಸಂದ್ರ ಕೆರೆಗೆ ಮುತ್ತಿ 42 ಮನೆ ನೆಲಸಮ ₹50 ಕೋಟಿ ಆಸ್ತಿ ವಶ (ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಏ. 25-…
ಸಾರಕ್ಕಿ ಕೆರೆಯಲ್ಲಿ ಇನ್ನೂ 18 ಮನೆ ತೆರವು
ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡಗಳ ನೆಲಸಮ ಕಾರ್ಯ ಮುಂದುವರೆದಿದ್ದು, ಶುಕ್ರವಾರ 18 ಕಟ್ಟಡಗಳನ್ನು ತೆರವು ಮಾಡಲಾಗಿದೆ.
ಡಿ.ಸಿ ನಾದಿನಿ ಮನೆ ನೆಲಸಮ
ಬೆಂಗಳೂರು: ಜೆ.ಪಿ.ನಗರದ ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆ ಜಿಲ್ಲಾಧಿಕಾರಿ ಅವರ ನಾದಿನಿಯ (ಪತ್ನಿಯ ಸೋದರಿ) ಮನೆಯನ್ನೂ ನೆಲಸಮ ಮಾಡಲಾಗಿದೆ.








