> ಅಕ್ರಮ ಮನೆ ಬಗ್ಗೆ ಸರ್ಕಾರ ನಿರ್ಧರಿಸುವವರೆಗೆ ವಾಣಿಜ್ಯ ಕಟ್ಟಡ ಮಾತ್ರ ತೆರವು: ರಾಮಲಿಂಗಾರೆಡ್ಡಿ
ಬೆಂಗಳೂರು ಅಕ್ರಮ ವಾಣಿಜ್ಯ ಕಟ್ಟಡ ಮಾತ್ರ ಧ್ವಂಸ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ಕಟ್ಟಲಾಗಿರುವವಾಸದಮನೆತೆರವು ಬಗ್ಗೆ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳು ವವರೆಗೂ ವಾಣಿಜ್ಯ ಕಟ್ಟಡಗಳನ್ನು ಮಾತ್ರ ತೆರವು ಗೊಳಿಸಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇದರಿಂದಾಗಿ ಬಾಣಸವಾಡಿ ಸೇರಿ ದಂತೆ ಹಲವು ಕೆರೆ ಒತ್ತುವರಿ ಪ್ರದೇಶಗಳಲ್ಲಿ ವಾಸವಾಗಿರುವ ನೂರಾರು ಕುಟುಂಬಗಳು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಕೆರೆ ಒತ್ತುವರಿ ಸಂಬಂಧಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಗರ ಜಿಲ್ಲಾಧಿಕಾರಿ ವಿ.ಶಂಕರ್ ಜತೆಗೂಡಿ ಸುದ್ದಿಗೋಷ್ಠಿ ನಡೆಸಿದ
ಕೆರೆ ಒತ್ತುವರಿ ಕಾಯಾಚರಣೆ ನಿಲ್ಲಲ್ಲ: ಸಿಎಂ
1 ಅಕ್ರಮವೆಸಗಿದವರೂ ಸ್ವರ್ಗದಿಂದ ಬಂದವರಾದರೂ ಬಿಡಲ್ಲ
ಬೆಂಗಳೂರು: ಪ್ರತಿಪಕ್ಷಗಳ ನಾಯಕರ ತೀವ್ರ ವಾಗ್ದಾಳಿಯ ನಡುವೆಯೂ ಕೆರೆ ಒತ್ತುವರಿ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದು ಅಕ್ರಮ ಕಟ್ಟಡಕರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಅಕ್ರಮ ಕಟ್ಟಡ ನಿರ್ಮಿಸಿರುವ ಬಿಲ್ಲರ್‌ಗಳು ಎಷ್ಟೇ ದೊಡ್ಡವರಾಗಿದ್ದರೂ ಬಿಡುವುದಿಲ್ಲ. ಯಾರು ಏನೇ ಮಾತನಾಡಿದರೂ ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಅಕ್ರಮ ಕಟ್ಟಡ ನಿರ್ಮಾಣ ಮಾಡಿದವರು ಸ್ವರ್ಗದಿಂದ ಇಳಿದವರೇ ಆದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಟುವಾಗಿ ಹೇಳಿದರು.
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ ಎಂದು ಮಾಜಿ ಶಾಸಕ ಎ.ಪಿರಾಮಸ್ವಾಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸರ್ಕಾರಕ್ಕೆ ಚಾಟಿ ಬೀಸುತ್ತಾರೆ. ಅಕ್ರಮ ಕಟ್ಟಡ ತೆರವುಗೊಳಿಸಿದರೆ ಪ್ರತಿಪಕ್ಷಗಳು ತಕರಾರು ತೆಗೆಯುತ್ತವೆ.
ಅವರು, ವಾಸದ ಮನೆ ಕೆಡವಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು ವಾಸದ ಮನೆಗಳನ್ನು ತೆರವು ಮಾಡುವುದಿಲ್ಲ. ಈ ವಿಚಾರದಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಬಲಾಡ್ಯರನ್ನು ಬಿಟ್ಟು ಬಡವರ ಮನೆ ಮಾತ್ರ ಕೆಡವಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರ. ಸಾರಕ್ಕಿ ಹಾಗೂ ಬಾಣಸವಾಡಿಯಲ್ಲಿ ತೆರವು ಮಾಡಿರುವ ಶೇ. 95ರಷ್ಟು ಕಟ್ಟಡಗಳು ವಾಣಿಜ್ಯ ಸಂಕೀರ್ಣಗಳಾಗಿವೆ. ಸಾರಕ್ಕಿಯಲ್ಲಿ 5 ಮನೆ ಮಾತ್ರ ತೆರವುಗೊಳಿಸಲಾಗಿದ್ದು ಬಾಣಸವಾಡಿಯಲ್ಲಿ ಯಾವುದೇ ಮನೆ ತೆರವುಗೊಳಿಸಿಲ್ಲ ಎಂದು ಹೇಳಿದರು.
> ಅಧಿಕಾರಿಗಳ ವಿರುದ್ಧ ಎಫ್ ಐಆರ್: ಕೆರೆ ಜಾಗ ಒತ್ತುವರಿ ಮಾಡಿನಕಲಿ ದಾಖಲೆ ಸೃಷ್ಟಿಸಿ ನಿವೇಶನ ರಚಿಸಿ ಮಾರಾಟ ಮಾಡಿದವರ ಮೇಲೂ ಕ್ರಮ ಕೈಗೊಳ್ಳಲಾಗುವುದು.