…ಒಂದನೇ ಪುಟದಿಂದ
ಅಪೋಲೊ ಆಸ್ಪತ್ರೆ ಸ್ವಾಧೀನಕ್ಕೆ ಪ್ರಸ್ತಾವ
ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪಿಸುವುದಾಗಿ ನಡೆದ ಜಮೀನನ್ನು ಖಾಸಗಿ ವಲಯದ ಅಪೋಬೊ ಐಷಾರಾಮಿ ಆಸ್ಪತ್ರೆಗೆ ಗುತ್ತಿ ಗೆಗೆ ನೀಡಲಾಗಿದೆ ಎಂಬುದನ್ನು ನಿವೃತ್ತ ಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿ ಯನ್ ನೇತೃತ್ವದ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯವಡೆ ಪತ್ತೆ ಮಾಡಿತ್ತು. ಜಮೀನಿನ ಒಡೆತನ ಉಳಿಸಿಕೊಳ್ಳುವುದಕ್ಕಾಗಿ ಅಪೋಲೊ ಆಸ್ಪತ್ರೆಯ ಕೊಠಡಿಯೊಂದಕ್ಕೆ ‘ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ’ ಎಂಬ ನಾಮಫಲಕ ನೆಡು ಹಾಕಲಾಗಿದೆ ಎಂಬುದು ಸ್ಥಳ ತನಿಖೆಯಲ್ಲಿ ಬಯಲಿಗೆ ಬಂದಿತ್ತು
ಆಸ್ಪತ್ರೆ ಇರುವ ಜಮೀನು ತಮಗೆ ಸೇರಿದ್ದು ಎಂದು ದೊರೆಸಾನಿಪಾಳ್ಯದ ಇಮ್ಯಾಕ್ಯುರೇಟ್ ಕನ್ಸೆಪ್ಸನ್ ಚರ್ಚ್ನ ಸದಸ್ಯ ಇಸಾಕ್ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇಸಾಕ್ ಅವರ ಕೋರಿಕೆಯನ್ನು ತಳ್ಳಿಹಾಕಿದ್ದ ಉಪ ವಿಭಾಗಾಧಿ ಕಾರಿ ನಾಗರಾಜ್, ಇಂಪೀರಿಯಲ್ ಆಸ್ಪತ್ರೆಗೆ ನೀಡಿದ್ದ ಜಮೀನು ದುರ್ಬಳಕೆ ಆಗಿದೆ ಎಂಬ ಅಭಿಪ್ರಾಯ ನೀಡಿದ್ದರು.
“ಇಂಪೀರಿಯಲ್ ಆಸ್ಪತ್ರೆಯನ್ನೇ ಅಪೋಲೊ ಆಸ್ಪತ್ರೆ ಖರೀದಿಸಿದೆ ಎಂಬ ಉತ್ತರ ಅಪೋಲೊ ಆಸ್ಪತ್ರೆಯ ಅಧ್ಯಕ್ಷರಿಂದ ಬಂದಿದೆ. ಇದು ಭೂ ಮಂಜೂರಾತಿ ಸಂದರ್ಭದಲ್ಲಿ ವಿಧಿಸಿದ್ದ ಪರತ್ತುಗಳ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಈ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಜರುಗಿಸಬೇಕು’ ಎಂದು 2014ರ ಫೆಬ್ರುವರಿ 3ರಂದು ಹೊರಡಿಸಿದ್ದ ಆದೇಶದಲ್ಲಿ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದ್ದರು.
ಆಸ್ಪತ್ರೆ ವಶಕ್ಕೆ ಶಿಫಾರಸು: ಇಂಪೀರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಡಾ.ಸೈಯದ್ ನಿಸಾರ್ ಅವರಿಗೆ ಐದು ಎಕರೆ ಜಮೀನು ಮಂಜೂರು ಮಾಡಿದ್ದ ಆದೇಶವನ್ನು ರದ್ದು ಮಾಡುವಂತೆ ಕೋರಿ ತಹಶೀಲ್ದಾರ್ ಸಲ್ಲಿಸಿದ್ದ ಪ್ರಸ್ತಾವವನ್ನು ಮಾನ್ಯಮಾಡಿ ಉಪ ವಿಭಾಗಾಧಿಕಾರಿ ಡಿ.29ರಂದು ಜಿಲ್ಲಾಧಿಕಾರಿಯವರಿಗೆ ಕಡತ ಸಲ್ಲಿಸಿದ್ದರು.
‘ಬಿಳೇಕಹಳ್ಳಿಯ ಸರ್ವೆ ನಂಬರ್ 154/11ರಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಮಂಜೂರು ಮಾಡಿದ್ದ ಜಮೀನನ್ನು ಎಲ್ಲ ಋಣಧಾರಗಳಿಂದ ಮುಕ್ತಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು. ಈ ಜಮೀನು ಮತ್ತು ಅಲ್ಲಿರುವ ಆಸ್ಪತ್ರೆಯ
600 ಕೋಟಿ ಸ್ವತ್ತು
ಇಂಪಿರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ನೀಡಿರುವ ಜಮೀನು ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲೇ ಇದೆ. ಸದ್ಯ ಒಂದು ಎಕರೆಗೆ * 60 ಕೋಟಿಯಷ್ಟು ದರವಿದೆ. ಐದು ಎಕರೆ ಜಮೀನಿನ ಮೌಲ್ಯ ೯ 300 ಕೋಟಿ ಆಗಬಹುದು. ಅಲ್ಲಿರುವ ಅಪೋಲೊ ಆಸ್ಪತ್ರೆಯ ಕಟ್ಟಡಗಳ ಮೌಲ್ಯವೂ 300 ಕೋಟಿ ದಾಟಬಹುದು ಎಂದು ಜಿಲ್ಲಾಡಳಿತದ ಸಿಬ್ಬಂದಿ ಅಂದಾಜು ಮಾಡಿದ್ದಾರೆ.
ಕಟ್ಟಡವನ್ನು ಯಥಾರೀತಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಹಸ್ತಾಂತರ ಮಾಡಬೇಕು. ಆಗ ಈ ಜಮೀನಿನ ಮಂಜೂರಾತಿಯ ಮೂಲ ಉದ್ದೇಶವಾದ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಸ್ಥಾಪನೆ ಸಫಲವಾಗುತ್ತದೆ” ಎಂದು ಉಪ ವಿಭಾಗಾಧಿಕಾರಿಯವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು.
ಉಪ ವಿಭಾಗಾಧಿಕಾರಿಯವರು ಮಂಡಿಸಿದ್ದ ಪ್ರಸ್ತಾವವನ್ನು ಅನುಮೋದಿಸಿರುವ ಜಿಲ್ಲಾಧಿಕಾರಿ, ಅಪೋಲೊ ಆಸ್ಪತ್ರೆ ವಶಕ್ಕೆ ಶಿಫಾರಸು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರಿಗೆ ಸೋಮವಾರ ಪ್ರಸ್ತಾವ ಸಲ್ಲಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಮತ್ತು ಕಂದಾಯ ಸಚಿವರ ಪರಿಶೀಲನೆ ಬಳಿಕ ಆಸ್ಪತ್ರೆ ವಶಕ್ಕೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಆದರೆ, ಕಾಲೇಜಿಗೆ ಹೋಗದೆ ಸ್ವಲ್ಪ ಸಮಯದಲ್ಲೇ ಮನೆಗೆ ಹಿಂದಿರುಗಿರುವ ಆತ ಮಧ್ಯಾಹ್ನ 12.30ರ ಸುಮಾರಿಗೆ ತಾಯಿಗೆ ಕರೆ ಮಾಡಿ ಕೊಠಡಿಯಲ್ಲಿ ಚೀಟಿ ಇಟ್ಟಿದ್ದೇನೆ. ಮನೆಗೆ ಬಂದ ನಂತರ ತೆಗೆದು ಓದು ಎಂದು ಹೇಳಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ. ಬಳಿಕ ಆತ ಮನೆಯಲ್ಲಿದ್ದ ತಂದೆಯ ಜೋಡಿ ನಳಿಕೆ ಬಂದೂಕನ್ನು ತೆಗೆದುಕೊಂಡು ಮೊದಲು ಹಾಸಿಗೆಗೆ ಗುಂಡು ಹಾರಿಸಿದ್ದಾನೆ. ನಂತರ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಗೀತಾ ಅವರು ಮಧ್ಯಾಹ್ನ 2 ಗಂಟೆ ವೇಳೆಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ‘ಅಮ್ಮ ದಯವಿಟ್ಟು ಕ್ಷಮಿಸು, ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಮತ್ತೆ ನಿಮ್ಮ ಮಗನಾಗಿ ಹುಟ್ಟಿ ಬರುತ್ತೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಜಿತೇಂದ್ರ ಪತ್ರ ಬರೆದಿಟ್ಟಿದ್ದಾನೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.