ಬೆಂಗಳೂರು, ಏ.20-ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡಿದ್ದ ನೂರಕ್ಕೂ ಹೆಚ್ಚು ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ನಗರ ಜಿಲ್ಲಾಧಿಕಾರಿ ಶಂಕರ್ ಭರವಸೆ ನೀಡಿದ್ದಾರೆ. ಸಾರಕ್ಕಿ ಕೆರೆ ಒತ್ತುವರಿ ತೆರವು ಅಂತಿಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಶಂಕರ್ ಅವರ ಬಳಿ ಅಲ್ಲಿನ ನೂರಾರು ನಿರಾಶ್ರಿತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸ್ವಾಮೀ… ನಮಗಿದ್ದಿದ್ದೇ ಅಂಗೈ ಅಗಲ ಜಾಗ. ನಮಗಿದು ಈ ಕೆರೆಯಂತ ಗೊತ್ತಿರಲಿಲ್ಲ. ಯಾರೋ ನಮ್ಮ ಮರ್ಳ್’ ಮಾಡಿ ಇಲ್ಲಿ ಗೂಡು ಕಳ್ಕೊಳ್ಳಿ ಅಂತ ಸಲಹೆ ನೀಡಿದ್ರು.

ಅವರ ಮಾತನ್ನ ನಂಬಿ ಸಾಲಸೋಲ ಮಾಡಿ ಚಿಕ್ಕದಾಗಿ ಮನೆ ಕಳ್ಕೊಂಡಿದ್ವಿ. ಈ ಮನೇನ ನೀವ್ ಒಡೆದ್ಮಾತ್ತೀದ್ದೀರ ” ಏನ್ ಮಾಡೋಕು ಅಂತ ನಮಗೆ ತೋಚುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಮ್ಮ ಕುಟುಂಬದಲ್ಲಿ ಎಳೆಕಂದಮ್ಮಗಳಿವೆ. ಸ್ಕೂಲ್‌ಗೆ ಹೋಗೋ ಮಕ್ಕಿವೆ. ಅವರನ್ನೂ ಸಾಕ್ಷೇಕು. ಮಾಡಿರೋ ಸಾಲ ತೀರಸ್ಟೇಕು. ಸರಿಯಾದ ಕೂಲಿನೂ ಇಲ್ಲ. ಹೀಗೇ ಆದ್ರೆ ನಾವು ಬದುಕಿದ್ರು, ಸತ್ತಂತೆ ಎಂದು ಅಲವತ್ತುಕೊಂಡರು. ನೂರಕ್ಕೂ ಹೆಚ್ಚು ನಿರಾಶ್ರಿತರ ಕಣ್ಣೀರಿಗೆ ಮಿಡಿದ ಜಿಲ್ಲಾಧಿಕಾರಿ ಶಂಕರ್ ಅವರು, ಯಾರು ನಿಜವಾದ ” ನಿರಾಶ್ರಿತರಿದ್ದಾರೋ ಅವರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಒಂದು ಅಂದಾಜಿನ ಪ್ರಕಾರ ಸಾರಕ್ಕಿ ಕೆರೆ ಒತ್ತುವರಿಯಲ್ಲಿ ನೂರು ನಿರಾಶ್ರಿತ ಕುಟುಂಬಗಳು ನೆಲೆಸಿವೆ ಎಂದು ಪ್ರಥಮ ಮಾಹಿತಿ ಬಂದಿದೆ. ಆ ಮಾಹಿತಿಯನ್ನಾಧರಿಸಿ ಆ ನೂರು ಕುಟುಂಬಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮ ಯೋಜನೆಯಡಿ ಮನೆ ನೀಡುವ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಕಾಲು ಹಿಡಿಯಲು ಮುಂದಾದ ನಿರಾಶ್ರಿತರು:

ಜಿಲ್ಲಾಧಿಕಾರಿಗಳು ಪುನರ್ವಸತಿ ಕಲ್ಪಿಸುತ್ತೇನೆ ಎಂಬ ಭರವಸೆ ನೀಡಿದೊಡನೆಯೇ ಎಲ್ಲಾ ಕಳೆದುಕೊಂಡು ಬದುಕು ಇಷ್ಟೇನಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ನಿರಾಶ್ರಿತ ಕುಟುಂಬಗಳ ಕಣ್ಣಂಚಿನಲ್ಲಿ ಆನಂದಬಾಷ್ಪಗಳು ಉದುರತೊಡಗಿದವು. ಕೂಡಲೇ ಜಿಲ್ಲಾಧಿಕಾರಿಗಳ ಕಾಲಿಗೆ ಎರಗಲು ಮುಂದಾದ ನಿರಾಶ್ರಿತರು ಸ್ವಾಮೀ…. ಎಲ್ಲಾದರೂ ಸೂರು ಕಲ್ಪಿಸಿಕೊಡಿ. ನಮ್ಮ ಜೀವನಪರ್ಯಂತ ನಿಮಗೆ ಚಿರಋಣಿಯಾಗಿರುತ್ತೇವೆ ಎಂದು ಮನವಿ ಮಾಡಿಕೊಂಡರು. ಅದಷ್ಟು ಬೇಗ ನಿಮ್ಮ ಕುಟುಂಬಗಳಿಗೆ ಸೂರು ಕಲ್ಪಿಸುತ್ತೇವೆ ಎಂದು ಶಂಕರ್ ಅವರು ಖಚಿತಪಡಿಸುತ್ತಿದ್ದಂತೆ ನಿರಾಶ್ರಿತ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟವು.

ಬಿಬಿಎಂಪಿ ವಶಕ್ಕೆ:

Leave a Reply

Your email address will not be published. Required fields are marked *

5 × 1 =