4 ದೇಗುಲಗಳು ಮುಜರಾಯಿ ವಶಕ್ಕೆ

ಬೆಂಗಳೂರು: ಕಾಚರಕನಹಳ್ಳಿ ಕೆರೆ ಜಾಗ ದಲ್ಲಿ ನಿರ್ಮಿಸಿಕೊಂಡಿದ್ದ ನಾಲ್ಕು ದೇವಸ್ಥಾನ ಗಳನ್ನು ಸರ್ಕಾರ ಸ್ಥಳೀಯರ ವಿರೋಧದ ನಡುವೆಯೇ ಮುಜರಾಯಿ ಇಲಾಖೆ ವಶಕ್ಕೆ ಮಂಗಳವಾರ ಪಡೆದು ಕೊಳ್ಳಲಾಗಿದೆ.

ಕಳೆದ జీల ದಿನಗಳ ಹಿಂದೆ ಕಾಚರಕನಹಳ್ಳಿ ಕೆರೆ ಸರ್ವೇ ನಂ. 153ರಲ್ಲಿ ಒತ್ತುವರಿ ಜಾಗವನ್ನು ಜಿಲ್ಲಾಡಳಿತ ತೆರವು ಮಾಡಿತ್ತು. ಆ ಸಂದರ್ಭದಲ್ಲಿ ಅಲ್ಲಿದ್ದ ಶಿವ, ಕನ್ನಿಕಾ ಪರಮೇಶ್ವರಿ, ಸಾಯಿ ಬಾಬಾ ಮತ್ತು ಕೋದಂಡರಾಮ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ದೇವಸ್ಥಾನಗಳ ವಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಜಿಲ್ಲಾಡಳಿತ ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿತ್ತು. ಕೆಲ ದಿನಗಳ ಹಿಂದೆ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ನೇತೃತ್ವದ ತಂಡ ಮಂಗಳವಾರ ದೇವಸ್ಥಾನಗಳನ್ನು ವಶಕ್ಕೆ ಪಡೆದಿದೆ. ಆದರೊಂದಿಗೆ ದೇವಸ್ಥಾನದಲ್ಲಿದ್ದ 11 ಹುಂಡಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಆದರೆ,

ಕಾರ್ಯಾಚರಣೆಯಲ್ಲಿ ತಹಸೀಲ್ದಾ‌ರ್ ಶಿವಪ್ಪ ಲಮಾಣಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಪಿ.ದಿನೇಶ್ ಮತ್ತಿತರ ಅಧಿಕಾರಿಗಳಿದ್ದರು.

ಮಾತಿನ ಚಕಮಕಿ

ದೇವಸ್ಥಾನಗಳನ್ನು ವಶಕ್ಕೆ ಪಡೆಯಲು ಬಂದಿದ್ದ ಅಧಿಕಾರಿಗಳ ಕೆಲಸಕ್ಕೆ ಸ್ಥಳೀಯ ಭಕ್ತರು ಮೊದಲಿಗೆ ತಡೆ ಒಡ್ಡಿದರು. ದೇವ ಸ್ಥಾನದ ಎದುರು ಫಲಕ ಹಾಕಲು ಮುಂದಾದಾಗ ಆಕ್ರೋಶಗೊಂಡ ಭಕ್ತರು ಮತ್ತು ಸ್ಥಳೀಯರು ಅಧಿಕಾರಿಗಳ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಅಧಿಕಾರಿಗಳು ಹಾಕಿದ್ದ ಫಲಕ ಕಿತ್ತುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಕೊನೆಗೆ ಅಧಿಕಾರಿಗಳು ಮಾತುಕತೆ ನಡೆಸಿ, ದೇವಸ್ಥಾನಗಳನ್ನು ವಶಕ್ಕೆ ಪಡೆದರು. ಆದರೆ, ಅಧಿಕಾರಿಗಳ ಈ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಸ್ಥಳೀಯರು ನಿರ್ಧರಿಸಿದ್ದಾರೆ.

ಕಾಚರಕನಹಳ್ಳಿಯ ದೇವಾಲಯದ ಮುಂದೆ ಸರ್ಕಾರದ ಆದೇಶ ಫಲಕ.

Leave a Reply

Your email address will not be published. Required fields are marked *

11 − 4 =