(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಮೇ ೮- ಕೆರೆ ಒತ್ತುವರಿ ಮಾಡಿಕೊಂಡಿರುವ ಭೂಗಳ್ಳ ರಿಂದ ವಿರೋಧಪಕ್ಷದ ಮುಖಂಡರುಗಳಿಗೆ ಹಣದ ಸೂಟ್‌ಕೇಸ್ ಹೋಗಿ ರಬೇಕು. ಹಾಗಾಗಿಯೇ ವಿರೋಧ ಪಕ್ಷಗಳು ಕೆರೆ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಹರಿಹಾಯ್ದರು.
ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಕೆರೆ ತೆರವು ಆಗಲೇಬೇಕು. ಭೂಗಳ್ಳರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಿ ಅವರ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಳ್ಳುವಂತೆ ಅವರು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ ಸಮಾರಂ ಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಬೇಕೋ ಬೇಡವೋ ಎಂಬುದು ಇತ್ಯರ್ಥವಾಗದೆ ಕೆರೆ ಬೇಕು ಎನ್ನುವುದಾ ದರೆ ಬಿಡಿಎ ಲೇಔಟ್ ಇರಲಿ, ಖಾಸಗಿ ಬಡಾವಣೆ ಇರಲಿ ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೆರೆ ಒತ್ತುವರಿ ಸಂದರ್ಭದಲ್ಲಿ ಅಮಾಯಕರಿಗೆ, ಬಡವರಿಗೆ ತೊಂದರೆ ಯಾಗಿದ್ದರೆ ಅವರಿಗೆ ಪರ್ಯಾಯ ನಿವೇಶನ ನೀಡಲಿ, ಆದರೆ, ಬೇರೆ ಕಡೆ ಆಸ್ತಿ-ಪಾಸ್ತಿ ಮಾಡಿಕೊಂಡು ಇಲ್ಲಿ ಕೆರೆ ಒತ್ತುವರಿ ಮಾಡಿಕೊಂಡಿರುವವರಿಗೆ ಯಾವುದೇ ಪರ್ಯಾಯ ಪರಿಹಾರಗಳನ್ನು ಒದಗಿಸಬಾರದು ಎಂದು ಅವರು ಹೇಳಿದರು.
ಕೆರೆ ಬೇಡ ಎನ್ನುವುದಾದರೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಹೇಳಿರುವಂತೆ ವಿಶೇಷ ಅಧಿವೇಶನ ಕರೆದು ಒಂದು ತೀರ್ಮಾನ ತೆಗೆದುಕೊಳ್ಳಲಿ ಎಂದವರು ಹೇಳಿದರು.
ಕೆರೆ ಒತ್ತುವರಿ ತೆರವು ಸಂಬಂಧ ವಿಶೇಷ ನ್ಯಾಯಾಲಯ ಆಗಬೇಕು ಎನ್ನುವ ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಭೂಗಳ್ಳರಿಗೆ ಶಿಕ್ಷೆ ನೀಡಲು ಕೂಡಲೇ ವಿಶೇಷ ನ್ಯಾಯಾಲಯ ಸ್ಥಾಪನೆಯಾಗ ಲೇಬೇಕು ಎಂದು ಅವರು ತಿಳಿಸಿದರು.
ಭೂಗಳ್ಳರಿಗೆ ಶಿಕ್ಷೆ ನೀಡುವ ಬಗ್ಗೆ ಬಹು ಹಿಂದೆಯೇ ಕಾನೂನು ರೂಪಿಸಲಾಗಿತ್ತು. ಆದರೆ, ಭೂಗಳ್ಳರು ಅದನ್ನು ತಡೆಯುವ ಪ್ರಯತ್ನ ನಡೆಸಿ ದ್ದರು. ನಾವೆಲ್ಲ ಹೋರಾಟ ಮಾಡಿದ್ದ ಫಲವಾಗಿ ರಾಷ್ಟ್ರ ಪತಿಗಳು ಈಗ ಈ ಮಸೂ ದೆಗೆ ಅಂಕಿತ ಹಾಕಿದ್ದಾರೆ. ಈ ಮಸೂದೆಯನ್ನು ಅನು ಷ್ಠಾನಗೊಳಿಸಿ ಭೂಗಳ್ಳರಿಗೆ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಶಾಂತಿನಗರ ಗೃಹ ನಿರ್ಮಾಣ ಸಂಘದ ಅವ್ಯವ ಹಾರಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿಯ ವರನ್ನು ಭೇಟಿ ಮಾಡು ತ್ತಿದ್ದೇವೆ. ಬಡವರಿಗೆ, ಅರ್ಹರಿಗೆ ನಿವೇಶನ ದೊರೆ ಯದಿದ್ದರೆ ರಕ್ತಪಾತವೇ ಆಗುತ್ತದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ಚರಿಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ” ಪಾಲ್ಗೊಂಡು ಗಾಂಧಿ ಚಿತ್ರಗಳನ್ನು ವೀಕ್ಷಿಸಿದರು.