ಪ್ರಜಾವಾಣಿ ವಾರ್ತೆ

ಕಾರ್ಯಾಚರಣೆ ಅಬಾಧಿತ

ಬೆಂಗಳೂರು: ಕೆರೆ ಜಾಗ ಒತ್ತುವರಿ ವಿರುದ್ಧದ ಕಾರ್ಯಾಚರಣೆ ಮುಂದು ವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಒತ್ತುವರಿ ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಸರ್ಕಾರ ಹಿಂದಡಿ ಇಡುವುದಿಲ್ಲ’ ಎಂದು ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜಮೀನು ಒತ್ತುವರಿ ಮಾಡಿದವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಒಂದೆಡೆ ಆರೋ ಪಿಸುವ ಬಿಜೆಪಿ, ಇನ್ನೊಂದೆಡೆ ಒತ್ತುವರಿ ತೆರವು ಮಾಡುವುದನ್ನೂ ವಿರೋಧಿಸು ತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಒತ್ತುವರಿ ತೆರವು ಕಾರ್ಯ ತಡೆಹಿಡಿಯಬೇಕು ಎಂದು ಬಿಜೆಪಿ ಮಂಡಿಸಿರುವ ಬೇಡಿಕೆ ಹಿಂದೆ ಯಾವ ಹಿತಾಸಕ್ತಿ ಅಡಗಿದೆ’ ಎಂದು ಅವರು ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಕೆರೆ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಅಬಾಧಿತ ಎಂದು ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೆರೆ ಜಮೀನಿನಲ್ಲಿ ಬಿಡಿಎ ನಿರ್ಮಿಸಿದ ಬಡಾವಣೆಗಳಲ್ಲಿ ಕಟ್ಟಿರುವ ಮನೆಗಳನ್ನು ನಾವು ನೆಲಸಮ ಮಾಡುವುದಿಲ್ಲ’ ಎಂದು ಹೇಳಿದರು.

ಬಿಡಿಎ ಕೂಡ ಸರ್ಕಾರದ

ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಕೆಲವರು ಒತ್ತುವರಿ ತೆರವು ಮಾಡಬೇಕು ಎಂದು ಹೋರಾಡುತ್ತಿದ್ದಾರೆ. ಆದರೆ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮಸೂದೆಯಲ್ಲಿ ಬದಲಾವಣೆ: ಬತ್ತಿ ಹೋಗಿರುವ ಕೆರೆಗಳ ಜಮೀನಿನಲ್ಲಿ ನಿರ್ಮಿಸಿರುವ ಮನೆಗಳನ್ನು ಸಕ್ರಮ ಭಾಗವೇ ಆಗಿದೆ. ಬಿಡಿಎ ಮೂಲಕ ಪಡೆದ ನಿವೇಶನದಲ್ಲಿ ಕಟ್ಟಿರುವ ಮನೆಗಳನ್ನು ನೆಲಸಮ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆರೆ ಜಮೀನಿನಲ್ಲಿ ಬಿಡಿಎ ಎಷ್ಟು ಬಡಾವಣೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿಯನ್ನು ಒಂದು ವಾರದಲ್ಲಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕ‌ರ್ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮಾಡಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮಸೂದೆಗೆ ಕೆಲವು ಬದಲಾವಣೆಗಳನ್ನು ತರಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಸೂದೆಯಲ್ಲಿ ಬದಲಾವಣೆ ತರಬೇಕು. ಯಾವುದು ಸಜೀವ ಕೆರೆ, ಯಾವುದು ನಿರ್ಜೀವ ಕೆರೆ ಎಂಬುದನ್ನು ಗುರುತಿಸಬೇಕು. ಬತ್ತಿ ಹೋಗಿರುವ ಕೆರೆಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಆಗ ಉಳಿಸಿಕೊಳ್ಳಬಹುದು’ ಎಂದರು.

ಲಕ್ಷ್ಮಣ ರಾವ್ ಸಮಿತಿ ನೀಡಿರುವ ವರದಿಯಲ್ಲಿರುವ ಉಳಿಸಿಕೊಳ್ಳಲೇಬೇಕು. ಆ ಕೆರೆಗಳನ್ನು ಸಮಿತಿ ಗುರುತಿಸಿದ್ದ ನಿರ್ಜೀವ ಕೆರೆಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಕೆರೆ ಜಮೀನು ಒತ್ತುವರಿ ಮಾಡಿದವರನ್ನು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತೆರವು ಮಾಡಲೇಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಸೂದೆಯಲ್ಲಿ ಬದಲಾವಣೆ ತರುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೆರೆ ಜಮೀನಿನಲ್ಲಿ ನಿರ್ಮಿಸಿರುವ ಬಡಾವಣೆಗಳನ್ನೂ ಉಳಿಸಿಕೊಳ್ಳಬಹುದು ಎಂದರು.

ಆದರೆ ಭೂಮಾಫಿಯಾಗಳು ಇದರಿಂದ ಪ್ರಯೋಜನ ಪಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

 

Leave a Reply

Your email address will not be published. Required fields are marked *

ten + 8 =