ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಆದೇಶ; 7 ದಿನಗಳಲ್ಲಿ ಕ್ರಮ
ಕನ್ನಡಪ್ರಭ ವಾರ್ತೆ, ಬೆಂಗಳೂರು ‘ಬೆಂಗಳೂರು ಕ್ಲಬ್’ನ ಜಮೀನು ಮಾಲೀ ಕತ್ವ ವಿವಾದ ಅಂತ್ಯಕಂಡಿದ್ದು, ಇನ್ನು ? ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.
ನಗರದಲ್ಲೇ ಅತಿ ಹಳೆಯ ಕ್ಲಬ್ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಕ್ಲಬ್ ಈ ಮೂಲಕ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ವಿಧಾನಸಭೆಯ ಸದನ ಸಮಿತಿ ಸೂಚನೆ. ಯಂತೆ ಸರ್ಕಾರದ ವಶಕ್ಕೆ ಭೂಮಿ ) ನೀಡುವಂತೆ ಉತ್ತರ ಉಪವಿಭಾಗಾಧಿಕಾರಿ ಮಹೇಶ್ ಬಾಬು ಆದೇಶಿಸಿದ್ದಾರೆ. ಹೀಗಾಗಿ ಇನ್ನು ಒಂದು ವಾರದಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ರೆಸಿಡೆನ್ಸಿ ರಸ್ತೆ ಬಳಿಯಿರುವ 13 ಎಕರೆ ಜಾಗವನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಒಪ್ಪಿಸಲಿದ್ದಾರೆ.
ರಾಜ್ಯದಲ್ಲಿನ ಕ್ಲಬ್‌ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಒಂದೂವರೆ ವರ್ಷಗಳ ಹಿಂದೆ ರಚನೆಯಾದ ವಿಧಾನಸಭೆ ಸದನ ಸಮಿತಿ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಜಮೀನುಮಾಲೀಕತ್ವದ ಬಗ್ಗೆ ಸೂಕ್ತ ದಾಖಲೆ ಇಲ್ಲದಿರುವುದು ಹಾಗೂ 13 ಎಕರೆ ಸರ್ಕಾರಕ್ಕೆ ಸೇರಿರುವ ಕುರಿತ ದಾಖಲೆಗಳ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
ರೋಚಕ ಇತಿಹಾಸ: ಬ್ರಿಟಿಷ್ ಕಾಲದಲ್ಲಿ ಆರಂಭವಾಗಿದ್ದ ಕ್ಲಬ್ ನಂತರ ಮೈಸೂರು ಒಡೆಯರ ವಶಕ್ಕೆ ಸೇರಿತ್ತು. ಮೈಸೂರು ಅರಸರ ಆಳ್ವಿಕೆ ಹೋಗಿ ಸರ್ಕಾರ ರಚನೆಯಾದ ನಂತರ, ಕ್ಲಬ್ ವಶಕ್ಕೆ ಸರ್ಕಾರ ನಿರ್ಧರಿಸಿತ್ತು. ಆದರೆ, ಬೆಂಗಳೂರು ಕ್ಲಬ್ ಖಾಸಗಿ ಆಸ್ತಿ ಎಂದು ಕೆಲವು ಉದ್ಯಮಿಗಳು ವಾದಿಸಿದ್ದರು. ನಂತರ ಸರ್ಕಾರದ ವಶಕ್ಕೆ ಉಳಿದಿತ್ತು. ಹೋಗದೆ ಖಾಸಗಿ ಕ್ಲಬ್ ಮಾದರಿಯಲ್ಲಿ
ಕ್ಲಬ್‌ನ ನೀತಿ ನಿಯಮಗಳು ಹಲವಾರು ವಿವಾದಗಳನ್ನೂ ಹುಟ್ಟಿಸಿದ್ದವು. ಜನಪ್ರತಿ ನಿಧಿಗಳು ಹಾಗೂ ಹಿರಿಯ ಅಧಿಕಾರಿ ಗಳಿಗೂ ಶಿಸ್ತು, ವಸ್ತ್ರಸಂಹಿತೆ ಕಾರಣವಾಗಿ ಪ್ರವೇಶಕ್ಕೆ ಅಡ್ಡಿಪಡಿಸಿದ ಘಟನೆಗಳು ನಡೆದಿದ್ದವು. ಇತ್ತೀಚೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿದಾಗ, ನಿಯಮ ಮೀರಿ ಅಲ್ಲೋ ಹಾಲ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಹೀಗಾಗಿ ಒಂದು ತಿಂಗಳ ಕಾಲ ಆಲ್ಲೋಹಾಲ್ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿರುವ ಕ್ಲಬ್‌ಗಳ ವಿವರ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ವರ್ಷದ ಹಿಂದೆ ಸದನ ಸಮಿತಿ ರಚಿಸಲಾಯಿತು. ಕ್ಲಬ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿ ಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು.
19ನೇ ಶತಮಾನದಿಂದ ಆರಂಭವಾಗಿ ಇಲ್ಲಿಯವರೆಗಿನ ಹಳೆಯ ದಾಖಲೆಗಳನ್ನು ಹುಡುಕಿ ತಂದು ಇತ್ತೀಚೆಗಷ್ಟೇ ಸದನ ಸಮಿತಿಗೆ ನೀಡಲಾಗಿತ್ತು.
> ಸದನ ಸಮಿತಿ ಸೂಚನೆಯಂತೆ ಬೆಂಗಳೂರು ಕ್ಲಬ್‌ನ 13 ಎಕರೆ ಭೂಮಿ ವಶಕ್ಕೆ ಆದೇಶ ಹೊರಡಿಸಲಾಗಿದೆ. ಮುಂದಿನ 7 ದಿನಗಳೊಳಗೆ ಸರ್ಕಾರ ಭೂಮಿ ವಶವಡಿಸಿಕೊಳ್ಳಬಹುದು. ಬಹಳ ವರ್ಷಗಳಿಂದ ಜಮೀನಿನ ಮಾಲೀ ಕತ್ವದ ಪ್ರಶ್ನೆ ಎದ್ದಿತ್ತು. ಮೈಸೂರು ಅರಸರಿಗೆ ಸೇರಿದ ಆಸ್ತಿಗಳು ರಾಜ್ಯ ಸರ್ಕಾರಕ್ಕೆ ಹಸ್ತಾಂತರವಾದಾಗಲೇ ಭೂಮಿ ವಶಕ್ಕೆ ನಡೆಯಬೇಕಿತ್ತು.
ಮಹೇಶ್ ಬಾಬು ಉತ್ತರ ಉಪವಿಭಾಗಾಧಿಕಾರಿ