ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿಮಾಡಿಕೊಂಡು ಅಕ್ರಮವಾಗಿ ಕಟ್ಟಡ ಅಥವಾ ಅಪಾರ್ಟ್‌ಮೆಂಟ್ ಕಟ್ಟಿದವರು ಎಷ್ಟೇ ಪ್ರಭಾವಿಗಳಾ ಗಿದ್ದರೂಸರಿ, ಅವರಆಸ್ತಿ-ಪಾಸ್ತಿಗಳನ್ನು ಮುಲಾ ಜಿಲ್ಲದೆ ತೆರವುಗೊಳಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತೆರವು ಕಾರ್ಯಾಚರಣೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಮಾಡಿರುವ ಟೀಕೆಗಳಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಅವರು, ‘ಒತ್ತುವರಿ ತೆರವುಗೊಳಿಸಿ ಎಂದು ಒತ್ತಾಯಿ ಸುವವರೇ, ಮತ್ತೊಂದೆಡೆ ತೆರವು ಗೊಳಿಸಿದ್ದನ್ನು ವಿರೋಧಿಸಿ ರಾಜಕೀಯ ಮಾಡುತ್ತಾರೆ. ಅವರ ಹಿತಾಸಕ್ತಿ ಏನಿದೆ ಬಿಜೆಪಿಯವರೇ ಬಹಿರಂಗಪಡಿಸಲಿ’ ಎಂದು ತಿರುಗೇಟು ನೀಡಿದರು.

ನಗರದ ನಾನಾ ಕಡೆಗಳಲ್ಲಿ ಸರ್ಕಾರಿ ಒತ್ತುವರಿಯಾಗಿರುವ ಬಗ್ಗೆ ಸರ್ಕಾರವೇ ನೇಮಿಸಿದ್ದ ಎ.ಟಿ. ರಾಮಸ್ವಾಮಿ ವರದಿಯನುಸಾರ ಸ್ವಾತಂತ್ರ್ಯ 6 ಹೋರಾಟಗಾರ 25.2. ದೊರೆಸ್ವಾಮಿ ಸೇರಿದಂತೆ ಅನೇಕರು, ಜಾಗ ಉಳಿಸಿ, ಒತ್ತುವರಿ ತೆರವು ಗೊಳಿಸಿ ಎಂದು ಒತ್ತಾಯಿಸುತ್ತಾರೆ.

ಮತ್ತೊಂ ದೆಡೆ ಒತ್ತುವರಿಯಾದ ಸರ್ಕಾರಿ ಜಾಗದಲ್ಲಿನ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದರೆ, ಸರ್ಕಾರ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಬಿಜೆಪಿಯವರು ಕೂಗಾಡುತ್ತಿದ್ದಾರೆ. ಹಾಗಾದರೆ, ಸರ್ಕಾರ ಏನು ಮಾಡಬೇಕು ಎನ್ನುವುದನ್ನು ಅವರೇ ಹೇಳಲಿ ಎಂದು ತರಾಟೆಗೆ ತೆಗೆದು ಕೊಂಡರು. ನಗರದಲ್ಲಿ ಸರ್ಕಾರಿ ಜಾಗಗಳು ಉಳಿಯಬೇಕೆಂಬುದಷ್ಟೇ ಸರ್ಕಾರ ಉದ್ದೇಶ ಎಂದು ಸ್ಪಷ್ಟ ಪಡಿಸಿದ ಅವರು, ಒತ್ತುವರಿ ಜಾಗ ಗಳಲ್ಲಿ ನಿರ್ಮಾಣವಾದ ಅಕ್ರಮ ಅಪಾರ್ಟ್ ಮೆಂಟ್‌ಗಳಲ್ಲಿ ಪ್ಲಾಟ್ ಖರೀದಿಸಿ ನಿರಾಶ್ರಿತರಾದವರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಆದೇಶ ಓದಿದ ಬಳಿಕ ಪ್ರತಿಕ್ರಿಯೆ

ಬಿಬಿಎಂಪಿಗೆ ಗೆ ಮೂರು ತಿಂಗಳೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಲು ನಿರಾಕರಿ ಸಿದ ಸಿದ್ದರಾಮಯ್ಯ, ಆದೇಶದ ವರದಿ ನೋಡಿದ ನಂತರ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.

Leave a Reply

Your email address will not be published. Required fields are marked *

eight + 18 =