About Us

About

ಸಿದ್ದರಾಮಯ್ಯರ 2013-18 ರ ನಡುವಿನ ಆಡಳಿತದ ಯುಕ್ತಿಯಾಗಿದ್ದ ಆ ಅಧಿಕಾರಿ ಯಾರು ಗೊತ್ತ  IAS ಅಧಿಕಾರಿ ವಿ. ಶಂಕರ್. 1985 ರ KAS ಅಧಿಕಾರಿ, ಹಲವು ಕಡೆ ಅಸಿಸ್ಟೆಂಟ್ ಕಮಿಷನರ್ ಆಗಿ, ಎರಡು ಸಲ ಮೂಡಾ ಕಮಿಷನರ್ ಆಗಿ, ಮೂರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಹಲವು ಇಲಾಖೆಗಳನ್ನು ದಕ್ಷತೆಯಿಂದ ನಿಷ್ಕಳಂಕವಾಗಿ ನಿಭಾಯಿಸಿದ್ದ ಅಧಿಕಾರಿ. ಅನುಭವಿ ಅಧಿಕಾರಿ, ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲದ ಅಧಿಕಾರಿ ಅನ್ನೋದನ್ನು ಎಲ್ಲಾ ಪಕ್ಷಗಳ ನಾಯಕರೂ ಒಪ್ಪುತ್ತಾರೆ. ಇಂಥ ಶಂಕರವರನ್ನೇ ಅಂದು ಸಿದ್ದರಾಮಯ್ಯ 2013 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದರು. ಬೆಂಗಳೂರು ಗ್ರಾಮಾಂತರದ ಜನ ದೂರದಿಂದ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಬರುವುದಕ್ಕೆ ಕಷ್ಟವಾಗುತ್ತೆ ಅನ್ನೋದನ್ನು ಮನಗಂಡ ಶಂಕರ್ ಅವರು ಜಿಲ್ಲಾಡಳಿತವನ್ನು ದೇವನಹಳ್ಳಿಗೆ ವರ್ಗಾಯಿಸಿದ್ದರು. ಈ ಕಾರಣಕ್ಕಾಗಿಯೇ ಬೆಂಗಳೂರು ಗ್ರಾಮಾಂತರದ ಜನ ಇವತ್ತಿಗೂ ವಿ. ಶಂಕರ್ ಅವರನ್ನು ನೆನಪಿಸಿಕೊಳ್ಳುತ್ತಾರೆ.

ಸಿದ್ದರಾಮಯ್ಯರವರಿಗೆ ಯುಕ್ತಿ ಶಂಕರಾಗಿದ್ದರೆ, ಶಕ್ತಿ ಕೆಂಪಯ್ಯ ಆಗಿದ್ದರು. 2006 ರಲ್ಲಿ ಕುಮಾರಸ್ವಾಮಿ ಮೊದಲ ಸಲ ಸಿಎಂ ಆಗಿದ್ದಾಗ ಬೆಂಗಳೂರಿನಾದ್ಯಂತ ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವ ಭೂಮಿಯ ಸಂಪೂರ್ಣ ವರದಿ ನೀಡುವಂತೆ ಎ.ಟಿ. ರಾಮಸ್ವಾಮಿ ನೇತೃತ್ವದ ಸದನ ಸಮಿತಿಯನ್ನು ರಚಿಸಿದ್ದರು.

ಆ ವರದಿಯಲ್ಲಿ 11,000 ಎಕರೆ ಭೂಮಿ ಒತ್ತುವರಿಯಾಗಿದೆ ಅನ್ನೋದು ವರದಿಯಲ್ಲಿತ್ತು.

ರಾಮಸ್ವಾಮಿಯವರು ನೀಡಿದ್ದ ವರದಿ ಧೂಳು ಹಿಡಿದು ಕುಳಿತಿತ್ತು. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಮೊದಲ ಸಲ ಪ್ರಗತಿಪರರ ಭೇಟಿಗೆ ಮುಂದಾದರು.

2014 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೈಸ್ವಾಮಿಯವರು ಸಿದ್ದರಾಮಯ್ಯ ಅವರಿಗೆ ಒಂದು ಮನವಿ ಮಾಡಿದ್ದರು; ಭೂಗಳ್ಳರಿಂದ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವುದಕ್ಕೆ ದಕ್ಷ ಜಿಲ್ಲಾಧಿಕಾರಿ ನೇಮಕ ಮಾಡುವಂತೆ ಕೋರಿದ್ದರು.

ಇದೇ ಸಂದರ್ಭ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ವಿ. ಶಂಕರ್ ಅವರು ಪೊಲೀಸರಿಗೂ ತಿಳಿಸದೆ, ಪೊಲೀಸ್ ಇಲಾಖೆಯ ರಕ್ಷಣೆಯನ್ನು ಪಡೆಯದೆ ತಾವೇ ಖುದ್ದಾಗಿ ಮರಳು ದಂಧೆ ಜಾಗಗಳಿಗೆ ಹೋಗಿ ಸೇಯ್ಜ್ ಮಾಡುತ್ತಿದ್ದರು.

ಈ ಮೂಲಕ ಮರಳು ದಂಧೆಗೆ ಬ್ರೇಕ್ ಹಾಕಿದ್ದರು. ರಾತ್ರೋರಾತ್ರಿ ಮರಳುಗಳ್ಳರ ನಿದ್ದೆ ಕೆಡಿಸಿದ್ದರು. ಈ ದಿಟ್ಟತನವನ್ನು ಮತ್ತು ಕೆಚ್ಚದೆಯನ್ನು ಕಂಡು 2014 ರಲ್ಲಿ ವಿ. ಶಂಕರ್ ಅವರನ್ನು ಸಿದ್ದರಾಮಯ್ಯ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದ್ದರು. ಎ.ಟಿ. ರಾಮಸ್ವಾಮಿಯವರ ವರದಿಯನ್ನು ಶಂಕರ್ ಅವರ ಕೈಗಿತ್ತು ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ವಿ.ಶಂಕರ್ (ಬೆಂಗಳೂರು ನಗರ ಜಿಲ್ಲಾಧಿಕಾರಿ): “ಇಲ್ಲಿ ಯಾರದೇ ಇದ್ದರೂ ಕೂಡ ತೆರವುಗೊಳಿಸಲೇಬೇಕಲ್ವಾ, ತೆರವುಗೊಳಿಸುತ್ತೇವೆ.”  

TV NEWS channel: ಹೇಮಂತ್ ರಾಜ್ (ಯುದ್ಧಭೂಮಿ ಹೋರಾಟಗಾರ ಸಮಿತಿ ಅಧ್ಯಕ್ಷ):

“ಸರ್ ಕಂದಾಯ ಇಲಾಖೆಯಲ್ಲಿ ಬಹಳಷ್ಟು ಜನ ಭ್ರಷ್ಟರಿದ್ದಾರೆ, ಅದರಲ್ಲಿ ಅನೇಕರು ಒಳ್ಳೆಯ ಅಧಿಕಾರಿಗಳು ಇದ್ದಾರೆ ಇಲ್ಲ ಅಂತ ಅಲ್ಲ. ಇವತ್ತು ನೋಡಿ ಒಳ್ಳೆಯ ಅಧಿಕಾರಿಗಳು ಇದ್ದಾರೆ ಅಂತ ನಾನು ಯಾಕೆ ಹೇಳ್ತಾ ಇದ್ದೀನಿ ಅಂದರೆ, ಒಳ್ಳೆಯ ಅಧಿಕಾರಿ ಇದ್ದಿದ್ದಕ್ಕೋಸ್ಕರ ಈ ಜಾಗ ರಕ್ಷಣೆಯಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿ ಶಂಕರ್ ಅಂತ ಹೇಳಿ ಜಿಲ್ಲಾಧಿಕಾರಿಗಳು ಇದ್ದರು. ಅವರು ಸಾವಿರಾರು ಎಕರೆ ಜಾಗ, ಸುಮಾರು 16 ವರೆ ಸಾವಿರ ಎಕರೆ ಜಾಗವನ್ನು, ಅಂದರೆ ಸರ್ಕಾರಿ ಜಾಗಗಳನ್ನು ಯಾರು ಒತ್ತುವರಿಯಿಂದ ಒತ್ತುವರಿ ಮಾಡಿದ್ದರೋ, ನಕಲಿ ಕಂದಾಯ ದಾಖಲೆಗಳನ್ನು ಯಾರು ಮಾಡಿಕೊಂಡಿದ್ದರೋ ಇದನ್ನೆಲ್ಲ ರದ್ದು ಮಾಡಿ ಒತ್ತುವರಿಯಿಂದ ತೆರವುಗೊಳಿಸಿದರು. ಯಾವುದೇ ಬಲಾಢ್ಯರು ಇರಲಿ, ಅವರ ಒತ್ತಡಕ್ಕೆ ಮಣಿಯದೆಯೇ ಇಂಥ ಜಾಗಗಳಿಗೆಲ್ಲ ಕಂಪೌಂಡ್ ಮಾಡಿಸಿದ್ದರು.”

ನಿರೂಪಕರು: ನಾವೆಲ್ಲರೂ ಡಾ. ವಿಷ್ಣುವರ್ಧನ್ ಅವರ ‘ಹಲೋ ಡ್ಯಾಡಿ’ ಅನ್ನೋ ಸಿನಿಮಾ ನೋಡಿರುತ್ತೇವೆ. ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿಯಾಗಿ ವಿಷ್ಣುವರ್ಧನ್ ಭೂಗಳ್ಳರ ವಿರುದ್ಧ ಕಾದಾಡಿ ಸರ್ಕಾರಿ ಭೂಮಿಯನ್ನು ತೆರವುಗೊಳಿಸುತ್ತಾರೆ. ‘ಹಲೋ ಡ್ಯಾಡಿ’ ಸಿನಿಮಾದ ಸನ್ನಿವೇಶಗಳನ್ನು ಮೀರಿಸುವಂತೆ ನಿಜ ಜೀವನದಲ್ಲೂ ಜಿಲ್ಲಾಧಿಕಾರಿಯಾಗಿ ವಿ. ಶಂಕರ್ ಅವರು ಸಹ ಭೂಗಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಮಾಧ್ಯಮಗಳು ಶಂಕರ್ ಅವರಿಗೆ ‘Demolition DC’ ಅನ್ನೋ ಬಿರುದು ನೀಡಿದ್ಧರು. ಶಂಕರ್ ಅವರು ಜವಾಬ್ದಾರಿ ವಹಿಸಿಕೊಂಡ ಕೂಡಲೇ ನಿರೀಕ್ಷೆಗೂ ಮೀರಿ ಒತ್ತುವರಿ ಭೂಮಿಯನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡರು. 11,000 ಎಕರೆ ಬದಲಿಗೆ 18,860 ಎಕರೆ ಭೂಮಿಯನ್ನು ತೆರವು ಮಾಡಿಸಿದ್ದರು.

2015 ರಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರು ಶಂಕರ್ ಅವರ ಈ ಸಾಧನೆಯನ್ನು ಗುರುತಿಸಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಂಕರ್ ಅವರ ರೀತಿಯಲ್ಲೇ ದೇಶದ ನಾನಾ ನಗರಗಳಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಭೂಮಿಯನ್ನು ತೆರವುಗೊಳಿಸುವ ಕಾರ್ಯ ಆಗಬೇಕು ಅಂತಲೂ ಹೇಳಿದ್ದರು ಪ್ರಧಾನಿ ಮೋದಿ. 2014 ರಲ್ಲಿ ವಿಜಯ ಕರ್ನಾಟಕ ಕೊಡಮಾಡುವ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೂ ವಿ. ಶಂಕರ್ ಭಾಜನರಾಗಿದ್ದರು. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ 5 ವರ್ಷಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 18,860 ಎಕರೆ ಭೂಮಿಯನ್ನು ಭೂಗಳ್ಳರಿಂದ ತೆರವುಗೊಳಿಸಿದ್ದು ತಮ್ಮ ಅಂದಿನ ಸರ್ಕಾರದ ಸಾಧನೆ ಅಂತ ಬರೆದುಕೊಂಡಿದ್ದರು.    

ಸಿದ್ದರಾಮಯ್ಯ (ಮುಖ್ಯ ಮಂತ್ರಿಗಳು): “ನಮ್ಮ ಸರ್ಕಾರ ಬಂದಿದ್ದಕ್ಕೆ ಸ್ವಲ್ಪ ಹೆಚ್ಚು ಒತ್ತು ಕೊಟ್ಟು, ಒತ್ತುವರಿ ತೆರವು ಮಾಡುವ ಕೆಲಸವನ್ನು ಮಾಡಿಕೊಟ್ಟಿತು.”

ಅಸಲಿಗೆ ಅವತ್ತಿನ ತೆರವು ಪ್ರಕರಣದ ಸಂಪೂರ್ಣ ಕ್ರೆಡಿಟ್ ವಿ. ಶಂಕರ್ ಅವರಿಗೆ ಸಲ್ಲುತ್ತದೆ. ಪ್ರಧಾನ ಮಂತ್ರಿ ವಿಶೇಷ ಪ್ರಶಸ್ತಿ ನೀಡಲು ಆಯ್ಕೆ ಸಮಿತಿಯು ವಿ. ಶಂಕರ್ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು.

ಆದರೆ ಸಿದ್ದರಾಮಯ್ಯ ಅವರ ಜೊತೆಗಿನ ಆತ್ಮೀಯ ಬಾಂಧವ್ಯಕ್ಕೆ ಚ್ಯುತಿ ಬರಬಾರದು ಎಂದು ಖುದ್ದು ಶಂಕರ್ ಅವರೇ ನಯವಾಗಿ ಪ್ರಧಾನಮಂತ್ರಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.

ವಿಶೇಷವೆಂದರೆ, ಒತ್ತುವರಿ ಭೂಮಿಯನ್ನು ತೆರವು ಮಾಡಿಸಿದ ಸಾಧನೆಯನ್ನು ಗೌರವಿಸಿ ಸ್ವಾತಂತ್ರ್ಯ ಹೋರಾಟಗಾರ ದೊರೈಸ್ವಾಮಿಯವರೇ ವಿ. ಶಂಕರ್ ಅವರ ಕಚೇರಿಗೆ ಬಂದು ಅವರನ್ನು ಸನ್ಮಾನಿಸಿ ಆಶೀರ್ವಾದ ಮಾಡಿದ್ದರು.

ಇದೇ ಸಂದರ್ಭದಲ್ಲೇ ಧ್ವನಿಯಿಲ್ಲದ ಎಷ್ಟೋ ಸಮುದಾಯಗಳ ಸಂಘ ಸಂಸ್ಥೆಗಳಿಗೆ ನಿವೇಶನ ಕೊಡಿಸಿದ್ದರು. ಬಡವರಿಗೆ 1 ಲಕ್ಷ ನಿವೇಶನ ಕೊಡಿಸಿದ ಕೀರ್ತಿ ಕೂಡ ಇದೇ ವಿ. ಶಂಕರ್ ಅವರಿಗೆ ಸಲ್ಲಬೇಕು.    

ಹೇಮಂತ್ ರಾಜ್ (ಯುದ್ಧಭೂಮಿ ಹೋರಾಟಗಾರ ಸಮಿತಿ ಅಧ್ಯಕ್ಷ): “5000 ಎಕರೆ ಜಾಗದ ಬಗ್ಗೆ ನಾನೇ ದೂರು ಕೊಟ್ಟಿದ್ದೆ.

ಇಂದು ಬೆಂಗಳೂರಿನಲ್ಲಿ 1 ಲಕ್ಷ ನಿವೇಶನಗಳನ್ನು ಸರ್ಕಾರ ಏನು ಹಂಚುತ್ತಿದೆ, ಆ ಹಂಚಿಕೆಯ ಜಾಗಗಳೆಲ್ಲವೂ ಒತ್ತುವರಿಯಿಂದ ತೆರವುಗೊಳಿಸಿ ಭೂಗಳ್ಳರಿಂದ ವಶಪಡಿಸಿಕೊಂಡ ಜಾಗ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.” 

ನಿರೂಪಕರು: ಇನ್ನು ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಶುಶ್ರೂಷೆ ಪಡೆಯುತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿಯ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್ ಅವರು ವಿ. ಶಂಕರ್ ಅವರಿಗೆ ಒಂದು ಆಫರ್ ನೀಡಿದ್ದರು; “ನಿಮ್ಮ ಸೇವಾ ಅವಧಿ ಮುಗಿದ ಮೇಲೆ ನಮ್ಮ ಪಕ್ಷ ಸೇರಿಕೊಳ್ಳಿ” ಎಂದು ಆಹ್ವಾನಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಜೊತೆಗಿನ ಆಪ್ತತೆಗೆ ಧಕ್ಕೆ ಬರಬಾರದು ಎಂದು ಮತ್ತೊಂದು ಆಲೋಚನೆಯನ್ನು ಸಹ ವಿ. ಶಂಕರ್ ಮಾಡಲಿಲ್ಲ. ಇವತ್ತು ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ ಹತ್ತು ಗುಂಟೆ ಜಾಗ ಉಳಿದಿದೆ ಎಂದರೆ ಅದಕ್ಕೂ ಕಾರಣ ವಿ. ಶಂಕರ್. ಅವತ್ತು ಡಿಸಿಯಾಗಿ ಶಂಕರ್ ಅವರು ಅಭಿಮಾನ್ ಸ್ಟುಡಿಯೋ ಸರ್ಕಾರಿ ಸ್ವತ್ತು ಎಂದು ಆದೇಶಿಸದೇ ಹೋಗಿದ್ದರೆ ಇವತ್ತು ಆ ಜಾಗವೂ ಕೂಡ ಉಳಿಯುತ್ತಿರಲಿಲ್ಲ.

ವೀರಕಪುತ್ರ ಶ್ರೀನಿವಾಸ್ (ರಾಜ್ಯಾಧ್ಯಕ್ಷರು ಡಾ|| ವಿಷ್ಣುವರ್ಧನ್ ಸೇನಾ ಸಮಿತಿ): “ಸ್ಮಾರಕಗಳು ರಾಜ್ಯದಲ್ಲಿ ಎಲ್ಲೇ ಆಗಲಿ, ಆ ಪುಣ್ಯಭೂಮಿ ಎನ್ನುವುದು ಅವರು ಅಂತ್ಯಸಂಸ್ಕಾರಗೊಂಡ ಜಾಗದಲ್ಲೇ ಇರಬೇಕು ಎನ್ನುವುದು ಮೊದಲ ವಿಷಯ. ಎರಡನೆಯದಾಗಿ, ಅಭಿಮಾನ್ ಸ್ಟುಡಿಯೋ ಎನ್ನುವುದು ಖಾಸಗಿ ಸ್ವತ್ತಲ್ಲ. ಅದು ಒಬ್ಬ ಕಲಾವಿದನಿಗೆ ಸರ್ಕಾರ ಗೌರವಪೂರ್ವಕವಾಗಿ ಬರಿ 300 ರೂಪಾಯಿ ಎಕರೆ ದರದಲ್ಲಿ ಕೊಟ್ಟಂತಹ ಗ್ರಾಂಟ್. ಆ 20 ಎಕರೆ ಜಮೀನಿನಲ್ಲಿ 10 ಎಕರೆಯನ್ನು ಈಗಾಗಲೇ ಅವರ ಮೊಮ್ಮಕ್ಕಳು ಮಾರಾಟ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಅದರ ಮುಟ್ಟುಗೋಲು ಪ್ರಕ್ರಿಯೆ ಕೂಡ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಅವರು ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಎಲ್ಲಾ ದಾಖಲೆಗಳಿವೆ. ಡಿಸಿ ಶಂಕರ್ ಅವರು ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಏಕೆಂದರೆ ನೀವು ಆ 10 ಎಕರೆ ಮಾರಾಟ ಮಾಡಿ ಆ ಹಣದಲ್ಲಿ ಅಭಿವೃದ್ಧಿ ಮಾಡಿಲ್ಲ.”    

ರಾಜು ಗೌಡ: “2015 ರಲ್ಲಿ ಯಾವಾಗ ಇವರು 2009 ರಿಂದ 16 ರ ವರೆಗೂ ಸ್ಮಾರಕ ನಿರ್ಮಾಣ ಮಾಡೋಕೆ ಜಾಗ ಕೊಡಲಿಲ್ವೋ, ಅಲ್ಲಿ ಸ್ಟೇ, ಸ್ಟೇ ಅಲೆಯುವುದು, ಕೋರ್ಟ್‌ಗೆ ಹೋಗೋದು ಇದೆ ಮಾಡಿಕೊಂಡು ಬಂದ್ರು.

ಇವ್ರು ತುಂಬಾ ತಾಳ್ಮೆ ಕಳೆದುಕೊಂಡ. ನಮ್ಮ DC ಶಂಕರ್ ಏನ್ ಮಾಡ್ತಾರೆ ಅಂದ್ರೆ, ನೀವು 10 ಎಕರೆ ಮಾರಿಕೊಂಡಿದ್ದು, ಅಭಿವೃದ್ಧಿಪಡಿಸಿಲ್ಲ.

ನಾವು ವಶಪಡಿಸಿಕೊಳ್ಳುತ್ತೇವೆ ಅಂತ ಎರಡು ಮುಖದ್ದಮೆಗಳನ್ನ 2015 ರಲ್ಲಿ ಹಾಕುತ್ತಾರೆ. ಇವಾಗ ಏನು ಕೇಸ್ ನಡಿತೈದ್ಯೋ 4504/2015 ಕೇಸು.

ಇದೂ ಆಯಿತು. ಅದಾದ್ಮೇಲೆ ಏನಾಯ್ತು? ತಂತಿಬೇಲಿ ಹಾಕಿ ಎಲ್ಲ ಬಾರ್ಕೋಡ್ತಾರೆ.

ತಂತಿಬೇಲಿ ಹಾಕಿ, ತೆಗೆಸಿ, ಪೂಜೆ ಮಾಡಿ, ತೆಗೆಸಿ. ಮತ್ತೆ ಭಾರತಿ ವಿಷ್ಣುವರ್ಧನ್ ಅವರು, ನಾವೆಲ್ಲ ಪಟಾಕಿ ಹೊಡೆದು, ಅಂತಿಮವಾಗಿ ಅಂತಿಮವಾಗಿ ಸಭೆ ಸೇರಿ 2017 ಡಿಸೆಂಬರ್ 19 ರಂದು ಸ್ಟುಡಿಯೋ ಮಾಲೀಕರು 10 ಕುಂಟೆ ಜಾಗ ಬಾರ್ಕೋಡ್ತಾರೆ”.

ನಿರೂಪಕರು: ಇದೇ ಶಂಕರ್ ಅವರ ಅಧಿಕಾರದ ಅವಧಿಯಲ್ಲೇ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆರಂಭಿಸಿರುವ ಡಾ|| ರಾಜಕುಮಾರ್ ಅಧ್ಯಯನ ಪೀಠದ ವಿಸ್ತರಣಾ ಕೇಂದ್ರಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡಿದ್ದರು.

ಯಲಹಂಕ ಹೋಬಳಿಯ ಬೆಳ್ಳಹಳ್ಳಿ ಗ್ರಾಮದ ಸರ್ವೆ ನಂಬರ್ 55 ರಲ್ಲಿ 2 ಎಕರೆ ಜಮೀನು ಮಂಜೂರಿ ಮಾಡಿದ್ದರು. ಜಮೀನಿನ ಪಹಣಿ ಕೂಡ ಆಗಿದೆ.”

ಉಮಾಶ್ರೀ (ಚಲನಚಿತ್ರ ನಟಿ): “ಅದು ಶಾಶ್ವತವಾಗಿ ಉಳಿಬೇಕು ಮುಂದಿನ ಪೀಳಿಗೆಗೆ. ಹಾಗಾಗಿ ಡಾ|| ರಾಜಕುಮಾರ್ ಅವರ ಅಧ್ಯಯನ ಕೇಂದ್ರ ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ.”

ಜಯಮಾಲಾ (ಚಲನಚಿತ್ರ ನಟಿ): “ನೋಡಿ, ಇದು ಸದುದ್ದೇಶದಿಂದ ಕೊಟ್ಟಿದ್ದು. ಆಗ ಮುಖ್ಯಮಂತ್ರಿಗಳಾಗಿ ನಮ್ಮ ಸಿದ್ದರಾಮಯ್ಯನವರು ಇದ್ದರು. ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಶಂಕರ್ ಅವರು ಅತ್ಯಂತ ಸರಳ ಸಜ್ಜನರು. ಅವರು ಕೇಳಿದ ತಕ್ಷಣವೇ ಆ ಎರಡು ಎಕರೆ ಜಾಗವನ್ನು ಕೂಡ ಬಿಡುಗಡೆ ಮಾಡಿದರು.”

ನಿರೂಪಕರು: ಇದೀಗ ಡಾ|| ರಾಜಕುಮಾರ್ ಅಧ್ಯಯನ ಪೀಠದ ವಿಸ್ತರಣಾ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ಕೂಡ ನಡೆದಿದೆ. ವಿಶೇಷ ಅಂದರೆ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದವರು ವಿಶ್ರಾಂತ ಕುಲಪತಿ ಡಾ|| ಮಲ್ಲಿಕಾ ಘಂಟಿ ಅವರು. ಇಂಥ ಶಕ್ತಿ ಹಾಗೂ ಯುಕ್ತಿ ಇವತ್ತು ಸಿದ್ದರಾಮಯ್ಯ ಅವರ ಜೊತೆಗಿಲ್ಲ. ಸಿದ್ದು ಆಡಳಿತದ ಸನಿಹಕ್ಕೂ ಈ ಜೋಡಿ ಅಪರೂಪಕ್ಕೆ ಸುಳಿಯುತ್ತಾರೆ. ಯಾಕೆ ಕಾರಣ? ಓರ್ವ ಫೈವ್ ಸ್ಟಾರ್ ರಾಜಕಾರಣಿ. ಸುಮಾರು 35 ವರ್ಷಗಳ ಆಡಳಿತದ ಅನುಭವ ಇರೋ ಕೆಂಪಯ್ಯ ಹಾಗೂ ವಿ. ಶಂಕರ್ ಸಿದ್ದರಾಮಯ್ಯರ ಆಡಳಿತದಲ್ಲಿ ಭಾಗಿ ಆಗದಿರಲು ಕಾರಣ ಇಬ್ಬರಲ್ಲೂ ಒಂದು ಸಾಮ್ಯತೆ ಇದೆ.

ವಿ. ಶಂಕರ್ ಅವರ ಒತ್ತುವರಿ ತೆರವು ಸಾಧನೆ ಗಮನಿಸಿದ ಜಿ ಕನ್ನಡ ವಾಹಿನಿ ತಮ್ಮ ಪ್ರಮುಖ ಕಾರ್ಯಕ್ರಮವಾದ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ಅತಿಥಿಯಾಗುವಂತೆ ಕೋರಿ ಹಲವು ಸಲ ಆಹ್ವಾನ ನೀಡಿದ್ದರು. ವಿಶೇಷ ಅಂದರೆ ಇಂಥದ್ದೇ ಆಹ್ವಾನ ಕೆಂಪಯ್ಯನವರಿಗೂ ಬಂದಿತ್ತು. ಇಬ್ಬರೂ ಅಧಿಕಾರಿಗಳು ಮೊದಲಿನಿಂದಲೂ ಪ್ರಚಾರ ಪ್ರಿಯರಲ್ಲ, ಹಾಗಾಗಿಯೇ ಈ ಆಹ್ವಾನದ ಬಗ್ಗೆ ಅಷ್ಟು ಗಮನ ಹರಿಸಲೇ ಇಲ್ಲ. ಇಬ್ಬರೂ ಸಹ ಮಾಧ್ಯಮಗಳೊಂದಿಗೆ ಸ್ನೇಹಪೂರ್ವಕವಾಗಿ ಇಲ್ಲದಿರುವುದು, 2013-18 ರ ಮಧ್ಯೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೆಲ ಕೋಮುವಾದಿ ಮಾಧ್ಯಮಗಳು ಸಿದ್ದರಾಮಯ್ಯ ಅವರ ರೀತಿಯಲ್ಲೇ ಕೆಂಪಯ್ಯ ಹಾಗೂ ವಿ. ಶಂಕರ್ ಅವರಿಗೂ ಕೂಡ ಪರದೆಯ ಹಿಂದೆ ಕಷ್ಟ ನೀಡಿದ್ದವು.

ಈ ಇಬ್ಬರೂ ಅಧಿಕಾರಿಗಳ ಸ್ಥಾನವನ್ನು ನಾನೊಬ್ಬನೇ ತುಂಬುತ್ತೇನೆ, ಅವರಿಬ್ಬರಿಗೂ ನಾನೊಬ್ಬನೇ ಪರ್ಯಾಯ ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯರ ಆಡಳಿತದಲ್ಲಿ ವಿಪರೀತ ಹಸ್ತಕ್ಷೇಪ ಮಾಡುತ್ತಿರೋ ಒಬ್ಬ 5 ಸ್ಟಾರ್ ರಾಜಕಾರಣಿ ಕಾರಣಕ್ಕೆ ಸಿದ್ದರಾಮಯ್ಯರ ಆಡಳಿತದ ಮೇಲೆ ಆರೋಪಗಳ ಸುರಿಮಳೆಯೇ ಬರುತ್ತಿದೆ. ಈ ಮೂಲಕ ಆ 5 ಸ್ಟಾರ್ ರಾಜಕಾರಣಿ ಸಿದ್ದರಾಮಯ್ಯ ಅವರ ವರ್ಚಸ್ಸು ಹಾಗೂ ನಿಷ್ಕಳಂಕ ಆಡಳಿತಕ್ಕೆ ದೊಡ್ಡ ಪೆಟ್ಟು ನೀಡಿದ್ದಾರೆ. 2013-18 ರ ಮಧ್ಯೆ ಸಿಎಂ ಸಿದ್ದರಾಮಯ್ಯನವರ ಬಹುತೇಕ ಎಲ್ಲ ಪ್ರಮುಖ ಇಲಾಖೆಗಳ ಸಭೆಗಳನ್ನು ವಿ. ಶಂಕರ್ ಅವರು ನೀಡುತ್ತಿದ್ದ ವರದಿಯನ್ನು ಆಧರಿಸಿಯೇ ನಡೆಸುತ್ತಿದ್ದರು. ಇವತ್ತಿಗೂ ಭೂಗಳ್ಳರು ಹೆದರುವ ಅಧಿಕಾರಿ ವಿ. ಶಂಕರ್.”

ರಾಧಾ ಹಿರೇಗೌಡರ್ (ಸುದ್ದಿ ನಿರೂಪಕಿ): “ಫ್ರಾಂಕ್ಲಿ ಸ್ಪೀಕಿಂಗ್, ಡಿಸಿ ಶಂಕರ್ ಅವರು ಈ ಬೆಂಗಳೂರಿನಲ್ಲಿರುವಂತಹ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ಬೊಕ್ಕಸಕ್ಕೆ ಲಾಭ ಮಾಡಿಕೊಟ್ಟರು.”

ಹೇಮಂತ್ ರಾಜು (ಅಧ್ಯಕ್ಷರು): “ಇವರೇನು ಕಡಿಮೆಯವರಲ್ಲ, ಇವರನ್ನೆಲ್ಲ ಎದುರಿಸಿ ಇವತ್ತು ಸುಮಾರು ಜಾಗವನ್ನು, ಅಂದರೆ ಲಕ್ಷಾಂತರ ಕೋಟಿ ಮೌಲ್ಯದ ಜಾಗವಿದು, ಇಷ್ಟು ಜಾಗವನ್ನು ಸೇಫ್ ಮಾಡಬೇಕೆಂದರೆ ಅವರಿಗೆ ‘ಡಬಲ್ ಬ್ಯಾರೆಲ್’ ಗುಂಡಿಗೆ ಇದೆ.”

ರಾಧಾ ಹಿರೇಗೌಡರ್ (ಸುದ್ದಿ ನಿರೂಪಕಿ):  “ಹೌದು, ಹೌದು”

ಹೇಮಂತ್ ರಾಜು (ಅಧ್ಯಕ್ಷರು): “ಶಂಕರ್ ಅವರಿಗೆ ಎರಡು ಮಾತಿಲ್ಲ ಮೇಡಂ.”

ನಿರೂಪಕರು: ರೌಡಿಗಳು ನಿದ್ದೆಗೆಡುವಂತಹ ಪೊಲೀಸ್ ಅಧಿಕಾರಿ ಕೆಂಪಯ್ಯನವರು

RA NEWS: “ಆಗ ಇದ್ದಂಥ ಒಬ್ಬರು ಟಫ್ ಸೂಪರ್ ಕಾಪ್ ಅಂದ್ರೆ ಕೆಂಪಯ್ಯನವರು. ಕೆಂಪಯ್ಯನವರು ಬಹಳ ಸ್ಟ್ರಿಕ್ಟ್ ಆಫೀಸರ್. ರೌಡಿಗಳು ಕೆಂಪಯ್ಯ ಅವರಿಗೆ ಆಗ್ತಾ ಇರಲಿಲ್ಲ. ರೌಡಿಗಳ ನೆಟ್ಟು ಬೋಲ್ಟ್‌ನ ಕಳಚಿ ಬಿಸಾಕುವವರು. ಹೇ ವಾಸ್ ಆ ಗುಡ್ ಆಫೀಸರ್ ಅಂದರೆ ಭಯ, ಇಡೀ ಭೂಗತ ಜಗತ್ತೇ ಸಣ್ಣಕ್ಕೆ ಶೇಕ್ ಆಗ್ತಾಯಿತ್ತು ಕೆಂಪಯ್ಯ ಅವರನ್ನು ಕಂಡರೆ.“

ನಿರೂಪಕರು: ಓರ್ವ ಫೈವ್ ಸ್ಟಾರ್ ರಾಜಕಾರಣಿ ಈ ಅಧಿಕಾರಿಗಳು ಸಿದ್ದು ಸರ್ಕಾರದಲ್ಲಿ ಬಾಗಿಯಾದರೆ ತನಗೆ ಯಾವುದೇ ರೀತಿಯ ಪ್ರಾಮುಖ್ಯತೆ ಇರುವುದಿಲ್ಲ ಎಂದು ತಿಳಿದು ಸಿದ್ದರಾಮಯ್ಯ ಅವರ ದಿಕ್ಕುತಪ್ಪಿಸುವ ಕೆಲಸವನ್ನ ಆ ಫೈವ್ ಸ್ಟಾರ್ ರಾಜಕಾರಣಿ ಮಾಡುತ್ತಿರೋದು ರಾಜ್ಯದ ಜನತೆಯೂ ಗಮನಿಸಿದೆ. ಹಳ್ಳಿಹಕ್ಕಿ ವಿಷ್ವನಾಥ್ ಸಹ ಆರೋಪ ಮಾಡಿದ್ದಾರೆ. ಒಂದು ವೇಳೆ ಕೆಂಪಯ್ಯನವರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಇದ್ದಿದ್ದರೆ ಇತ್ತೀಚಿನ ದಿನಗಳಲ್ಲಿ ವಿರೋಧಿಗಳು ನಡೆಸುತ್ತಿರುವ ಯಾವುದೇ ಷಡ್ಯಂತ್ರಗಳು ಸಫಲವಾಗುತ್ತಿರಲಿಲ್ಲ. ಎರಡು ಸಲ ಮೂಡಾ ಆಯುಕ್ತರಾಗಿ ಅನುಭವವಿದ್ದ ವಿ. ಶಂಕರ್ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ವಿ. ಶಂಕರ್ ಅವರು ಭಾಗಿಯಾಗಿದ್ದರೆ ಮೂಡಾ ಹಗರಣದ ಆರೋಪವೂ ಬಾರದಂತೆ ಮುನ್ನೆಚ್ಚರಿಕೆಯ ಸಲಹೆಗಳನ್ನ ಸಿಎಂ ಅವರಿಗೆ ಆಡಳಿತಾತ್ಮಕವಾಗಿ ನೀಡುತ್ತಿದ್ದರು. ಸಿದ್ದರಾಮಯ್ಯ ಐದು ವರ್ಷ ಅವಧಿಗೂ ಮುಂದುವರೆಯುವ ಸಾಧ್ಯತೆ ಇತ್ತು.