ಕಾಚಮಾರನಹಳ್ಳಿಯಲ್ಲಿ ರವಿಶಂಕರ್ ಗುರೂಜಿ ವಿದ್ಯಾಮಂದಿರದಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಪೂರ್ವ ತಾಲೂಕು ತಹಸೀಲ್ದಾರ್ ಬಿ.ಆರ್.ಹರೀಶ್ ನಾಯ್ಕ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಬೆಂಗಳೂರು: ಕಾಚಮಾರನಹಳ್ಳಿಯಲ್ಲಿ ರವಿಶಂಕರ್ ಗುರೂಜಿ ವಿದ್ಯಾಮಂದಿರ ಒತ್ತುವರಿ ಮಾಡಿಕೊಂಡಿದ್ದ 1.20 ಎಕರೆ ಸೇರಿದಂತೆ ಒಟ್ಟು 6.21 ಎಕರೆ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದಿದೆ.
ಶುಕ್ರವಾರ ಜಿಲ್ಲಾಧಿಕಾರಿ ವಿ.ಶಂಕರ್ ಸೂಚನೆಯಂತೆ ಪೂರ್ವ ತಾಲೂಕು ತಹಸೀಲ್ದಾರ್ ಜಿ.ಆರ್.ಹರೀಶ್ ನಾಯ್ಕ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. ಕಾಚಮಾರನಹಳ್ಳಿ, ನಹಳ್ಳಿ, ಬೈಯ್ಯಪ್ಪನಹಳ್ಳಿ ಕಮ್ಮಸಂದ್ರದಲ್ಲಿ ಸುಮಾರು 18 ಕೋಟಿ ಮೌಲ್ಯದ6.21 ಎಕರೆ ಜಮೀನು, ಶಿಕ್ಷಣ ಸಂಸ್ಥೆಯ ವಾಹನ ನಿಲ್ದಾಣ ಹಾಗೂ ಕೃಷಿಗಾಗಿ ಬಳಕೆಯಾಗುತ್ತಿತ್ತು.
ವರ್ತೂರು ಹೋಬಳಿಯ ಕಾಚಮಾರನಹಳ್ಳಿ ಗ್ರಾಮದ ಸರ್ವೆ ನಂ.28 ರಲ್ಲಿ 1.38 ಎಕರೆ ಸರ್ಕಾರಿ ಖರಾಬು ಜಮೀನಿನ ಪೈಕಿ 1.20ಎಕರೆ ಜಮೀನನ್ನು ರವಿಶಂಕರ್ ಗುರೂಜಿ ವಿದ್ಯಾ ಮಂದಿರ, 5-6 ವರ್ಷಗಳಿಂದ ರಸ್ತೆಯಾಗಿ ಹಾಗೂಶಾಲಾವಾಹನಗಳನಿಲುಗಡೆಗಾಗಿ ಬಳಸಿಕೊಂಡಿತ್ತು. ಹಲವು ವರ್ಷಗಳಿಂದ ಈ ಜಮೀನು ಭೂಮಾಲಿಕರ, ಸರ್ಕಾರದ ಹಾಗೂ ವಿದ್ಯಾಮಂದಿರದ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಇದೀಗ ತಹಸೀಲ್ದಾರ್ ನೇತೃತ್ವದ ತಂಡ, ವಾಹನ ನಿಲ್ದಾಣ ತೆರವುಗೊಳಿಸಿ ಜಮೀನು ವಶಕ್ಕೆ ಪಡೆದಿದೆ.
‘ಈ ಜಾಗ ಸರ್ಕಾರಕ್ಕೆ ಸೇರಿರುವುದರಿಂದ ಶೀಘ್ರವಾಗಿ ಒತ್ತುವರಿ ತೆರವುಗೊಳಿಸಬೇಕೆಂದು ವಿದ್ಯಾಮಂದಿರಕ್ಕೆ ಆದೇಶಿಸಲಾಗಿತ್ತು. ಒತ್ತುವರಿಯಾದ ಜಾಗ ಕೃಷ್ಣರೆಡ್ಡಿ ಎಂಬುವವರಿಗೆ ಸೇರಿದ್ದು, ಒತ್ತುವರಿ ತೆರವು ವೇಳೆ ಕೃಷಿಗಾಗಿ ಒತ್ತುವರಿ ಬೈಯ್ಯಪ್ಪನಹಳ್ಳಿ ಹಾಗೂ ಕಮ್ಮಸಂದ್ರದಲ್ಲಿ ಕೃಷಿಗಾಗಿ ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ವಶಕ್ಕೆ ಪಡೆಯಲಾಗಿದೆ.
ಬೈಯಪ್ಪನಹಳ್ಳಿಯಲ್ಲಿ ಸರ್ವೆ ನಂ.8 ರಲ್ಲಿದ್ದ 31.27 ಎಕರೆ ಕೆರೆಯ ಪೈಕಿ 2.21 ಎಕರೆ ಒತ್ತುವರಿ ತೆರವುಗೊಳಿಸಲಾಯಿತು. ಸ್ಥಳೀಯರಾದ ಲೋಕೇಶ್, ಚಿಕ್ಕಣ್ಣ ಹಾಗೂ ಅಪ್ಪಯ್ಯ ಎಂಬುವರು ಕೆರೆ ಒತ್ತುವರಿ ಮಾಡಿಕೊಂಡು ವ್ಯವಸಾಯಕ್ಕಾಗಿ ಬಳಸುತ್ತಿದ್ದರು.ಕಮ್ಮಸಂದ್ರ ಗ್ರಾಮದಸರ್ವೆ.ನಂ.34 ರಲ್ಲಿ ಕೃಷಿಗಾಗಿ ಒತ್ತುವರಿಯಾಗಿದ್ದ 1.32 ಎಕರೆ ಸರ್ಕಾರಿ ಗುಂಡುತೋಪು ಜಮೀನನ್ನು ವಶಕ್ಕೆ ఐడియలాగిడి. నాగరాజు ఎంబువరు 1.20 ಎಕರೆ, ಚಿಕ್ಕಣ್ಣ 2 ಗುಂಟೆ, ಬಿ.ಎಂ.ಮುನಿಶಾಮಪ್ಪ 25 ಗುಂಟೆ ಹಾಗೂ ಬಿ.ಎಂ.ರಾಮಪ್ಪ ಎಂಬುವರು ಜಮೀನನ್ನು ಒತ್ತುವರಿ 25 ಮಾಡಿಕೊಂಡಿದ್ದರು.
ವಿದ್ಯಾಮಂದಿರ ಟ್ರಸ್ಟ್‌ನಿಂದ ವಿರೋಧ ವ್ಯಕ್ತವಾಯಿತು. ಸರ್ಕಾರಿ ಜಮೀನಾಗಿರುವುದರಿಂದ ವಶಕ್ಕೆ ಪಡೆಯಲಾಗಿದೆ’ ಎಂದು ತಹಸೀಲ್ದಾರ್ ಹರೀಶ್ ನಾಯ್ಕ ತಿಳಿಸಿದ್ದಾರೆ.
ಎಂ.ಕೆ.ನಾರಾಯಣಸ್ವಾಮಿ ಹಾಜರಿದ್ದರು.