ಅಭಿಮಾನ್ ಸ್ಟುಡಿಯೋದ ಬಳಿ 2 ಎಕರೆಯಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸುವ ಕುರಿತು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ ಅವರೊಂದಿಗೆ ಜಿಲ್ಲಾಧಿಕಾರಿ ವಿ. ಶಂಕರ್ ಚರ್ಚೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಅಭಿಮಾನ್ ಸ್ಟುಡಿಯೋದ 10 ಎಕರೆ ಜಾಗದಲ್ಲಿ 2 ಎಕರೆಯನ್ನು ನಟ ವಿಷ್ಣುವರ್ಧನ್ ಸ್ಮಾರಕಕ್ಕೆ ನೀಡಲು ನಿರ್ಧರಿಸಿದ್ದು, ಈ ಪ್ರಸ್ತಾವನೆಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಕಳುಹಿಸಿದೆ.
ಮೈಲಸಂದ್ರದ ಸ.ನಂ. 68ರಲ್ಲಿ ನಟ ಬಾಲಕೃಷ್ಣ ಅವರ ಕುಟುಂಬದ ಒಡೆತನದಲ್ಲಿರುವ ಅಭಿಮಾನ್ ಸ್ಟುಡಿಯೋದ10 ಎಕರೆ ಜಾಗದಲ್ಲಿ ಒಂದು ಕಡೆ ನಟ ವಿಷ್ಣುವರ್ಧನ್ ಸಮಾಧಿಯಿದ್ದು, ಇಲ್ಲಿಯೇ ಸ್ಮಾರಕ ನಿರ್ಮಿಸಲು ಜಿಲ್ಲಾಡಳಿತ ಸೂಚಿಸಿದೆ.
ನಟ ಬಾಲಕೃಷ್ಣ ಅವರ ಕುಟುಂಬ ಹಾಗೂ ಭಾರತಿ ವಿಷ್ಣುವರ್ಧನ್ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆ ಸಿದ್ದು, ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಜಾಗ ವನ್ನು ಅಭಿವೃದ್ಧಿಪಡಿಸುವಸಂಬಂಧನಟಬಾಲಕೃಷ್ಣ ಅವರಕುಟುಂಬ ಷರತ್ತು ಉಲ್ಲಂಘಿಸಿದ್ದು, ವಶಕ್ಕೆ ಪಡೆ ಯಲು ಈ ಹಿಂದೆ ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಈಗ ಅಭಿವೃದ್ಧಿ ಮಾಡುವ ಬಗ್ಗೆ ಹಾಗೂ2ಎಕರೆಯನ್ನುಸ್ಮಾರಕ್ಕೆ ನೀಡಲುಒಪ್ಪಿಸಿರುವುದರಿಂದ ವಿವಾದ ಅಂತ್ಯವಾಗಿದೆ.
1970ರಲ್ಲಿ ಸ.ನಂ.26ರ ಅಭಿಮಾನ್ ಸ್ಟುಡಿಯೋ ಇದ್ದ 20 ಎಕರೆ ಜಾಗವನ್ನು ಸರ್ಕಾರ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ನೀಡಿತ್ತು.ನಂತರ ಜಾಗಅಭಿವೃದ್ಧಿಪಡಿಸಲು ಕುಟುಂಬದವರು 10 ಎಕರೆ ಜಾಗವನ್ನು ಮಾರಾಟ ಮಾಡಿದ್ದರು. ಮಾರಾಟ ಮಾಡಿ ಬಂದ ಹಣದಲ್ಲಿ ಜಾಗ ಅಭಿವೃದ್ಧಿಪಡಿಸಲಾಗುವುದು ಎಂದು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ಹಲವುವರ್ಷ ಕಳೆದರೂಜಾಗಅಭಿವೃದ್ಧಿಪಡಿಸಿರಲಿಲ್ಲ. ಹೀಗಾಗಿ ಭೂಮಿ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿತ್ತು. ಜಾಗಅಭಿವೃದ್ಧಿಪಡಿಸುವುದರೊಂದಿಗೆ 2ಎಕರೆಯನ್ನು ಸ್ಮಾರಕಕ್ಕೆ ನೀಡುವಂತೆ ಜಿಲ್ಲಾಡಳಿತಸೂಚಿಸಿದ್ದು, ಎರಡೂಕುಟುಂಬಗಳು ಸಮ್ಮತಿಸಿವೆ.
ವಿವಾದದ ಅಂತ್ಯದಿಂದ ನಟ ವಿಷ್ಣುವರ್ಧನ ಸ್ಮಾರಕಕ್ಕೂ ಜಾಗ ದೊರೆತಿದೆ. ಮೈಲಸಂದ್ರದ ಸ.ನಂ. 22ರಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ 2 ಎಕರೆ ನೀಡಿದಾಗ ಹೈಕೋರ್ಟ್ಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣಅಂತ್ಯಗೊಂಡುಹೊರಬಂದತೀರ್ಪಿನಂತೆ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿತ್ತು. ಹೀಗಾಗಿ ಸ್ಮಾರಕ ನಿರ್ಮಾಣದ ಕನಸು ಭಗ್ನಗೊಂಡಿತ್ತು.