ಬೆಂಗಳೂರು: ಕೆಲವೇ ತಿಂಗಳ ಹಿಂದೆ
ಪುಟ್ಟೇನಹಳ್ಳಿಯಲ್ಲಿ ನಿರ್ಮಾಣಗೊಂಡ ಮೂರು ಮಹಡಿಯ ಹೊಚ್ಚ ಹೊಸ ಕಟ್ಟಡ ನಳನಳಿಸುತ್ತಿತ್ತು, ಗುರುವಾರ ಬಿಸಿಲೇರುವ ಮುನ್ನವೇ ಜಿಸಿಬಿ ಗರ್ಜನೆ ಯಿಂದ ಕಟ್ಟಡ ಬಣ್ಣ ಕಳೆದುಕೊಂಡಿತ್ತು.
ಸಾರಕ್ಕಿ ಕೆರೆಯ ಒತ್ತುವರಿ ಕಾರ್ಯಾಚರಣೆಯ ವೇಳೆಗೆ ಗುರುವಾರ ಕಂಡುಬಂದ ಚಿತ್ರವಿದು. ಜಿಲ್ಲಾಡಳಿತದ ಸಿಬ್ಬಂದಿ ಅತೀ ದೊಡ್ಡ ಕಾರ್ಯಾಚರಣೆ ನಡೆಸುವ ಉಮೇದಿನಲ್ಲಿ ಇದ್ದರೆ, ನೆಲೆ ಕಳೆದುಕೊಂಡವರಿಗೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವ
ಲಕ್ಷಗಟ್ಟಲೆ ಸಾಲ ಮಾಡಿ ಕಟ್ಟಿ ಪ್ರೀತಿಯಿಂದ ನೆಲೆಸಿದ್ದ ಸೌಧ ಕಣ್ಣೆದುರೇ ನಲಸಮ ವಾಗುತ್ತಿರುವುದು ಒಂದೆಡೆ ಯಾದರೆ, ‘ಮುಂದಲ್ಲಿ ಹೋಗುವುದು’ ಎಂಬ ಚಿಂತೆ ಇನ್ನೊಂದೆಡೆ, ಸ್ಥಳೀಯ ರಾಜಕೀಯ ವ್ಯಕ್ತಿಗಳು ಜಿಲ್ಲಾಡಳಿತದ ಮನವೊಲಿಸುತ್ತಿದ್ದ ದೃಶ್ಯವೂ ಕಂಡು ಬಂತು
ಸಾರಕ್ಕಿಯಲ್ಲಿ ಒಂದೇ ದಿನದಲ್ಲಿ ಧ್ವಂಸಗೊಂಡಿದ್ದು 200ಕ್ಕೂ ಅಧಿಕ ಕಟ್ಟ ಡಗಳು, ಕೆಲವು ಕಟ್ಟಡಗಳು ಪೂರ್ತಿ ಧ್ವಂಸಗೊಂಡವು. ಇನ್ನೂ ಹಲವು ಕಟ್ಟಡ ಗಳ ಪಾಯಕ್ಕೆ ಪೆಟ್ಟು ಬಿತ್ತು. 2 ಅಡಿ, 4 ಕಟ್ಟಡಗಳ ಅಡಿ, ಆರು ಅಡಿ ಒತ್ತುವರಿಯಾಗಿ ನಿರ್ಮಾಣಗೊಂಡಿದ್ದಕಟ್ಟಡಗಳ
ಸಾರಕ್ಕಿ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯ ನೋಟ
ಮೇಲೂ ಜೆಸಿಬಿ ಗದಾಪ್ರಹಾರ ನಡೆಸಿತು.
ಜಿಲ್ಲಾಡಳಿತದ ನೋಟಿಸ್‌ಗೆ ಸ್ಪಂದಿಸಿ ಸುಮಾರು ಮನೆಗಳ ನಿವಾಸಿಗಳು ಮನೆ ಸಾಮಗ್ರಿಗಳನ್ನು ಬುಧವಾರವೇ ಸಾಗಿಸಿ ದ್ದರು. ಹಲವರು ಕಾರ್ಯಾಚರಣೆ ಆರಂ ಭವಾಗುತ್ತಿದ್ದಂತೆ ಸಾಮಗ್ರಿಗಳನ್ನು ಬಯ ಲಿಗೆ ಸ್ಥಳಾಂತರಿಸಿದರು. 4 5 ಅಡಿಗಳಷ್ಟು ಒತ್ತುವರಿ ತೆರವಾದ ಕಟ್ಟಡಗಳಲ್ಲಿ ನೆಲೆ ಸಿದ್ಧ ನಿವಾಸಿಗಳ ಮೊಗದಲ್ಲಿ ಆತಂಕ ಮಡುಗಟ್ಟಿತ್ತು. ಬಾಡಿಗೆದಾರರು ಲಾರಿ ಗಳಲ್ಲಿ ಸಾಮಗ್ರಿಗಳನ್ನು ಸ್ಥಳಾಂತರಿಸಿದರು.
’15 ವರ್ಷಗಳ ಹಿಂದೆ ಖಾಗ ಖರೀದಿ ಮಾಡಿ ಮನ ನಿರ್ಮಿಸಿದ್ದೇವೆ. ಮನೆಗಾಗಿ ₹28 ಲಕ್ಷ ಸಾಲ ಮಾಡಿದ್ದೇವೆ.
ಈಗಲೂ ಸಾಲದ ಕಂತು ಕಟ್ಟುತ್ತಿದ್ದೇವೆ. 2 ಅಡಿ ಒತ್ತುವರಿಯಾಗಿದೆ ಎಂಬ ಕಾರಣ ನೀಡಿ ನೋಟಿಸ್ ನೀಡದೆ ಕಾರ್ಯಾ ಚರಣೆ ನಡೆಸಿದ್ದಾರೆ’ ಎಂದು ನಿವಾಸಿ ರಾಧಾ ಮದನ್ ಮೋಹನ್ ಅಳಲು ತೋಡಿಕೊಂಡರು.
‘2001ರಲ್ಲಿ ಅರಣ್ಯ ಇಲಾಖೆ ಸಮೀಕ್ಷೆ ನಡೆಸಿ ಗಡಿ ಗುರುತು ಹಾಕಿತ್ತು. ಕೆರೆಯ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಮನೆಗಳು ನಿರ್ಮಾಣವಾಗಿವೆ. ಈಗ ಈ ಕಟ್ಟಡಗ ಳನ್ನೂ ತೆರವುಗೊಳಿಸಲಾಗುತ್ತಿದೆ. ವೈಮಾ ನಿಕ ಸಮೀಕ್ಷೆಯಿಂದ ಒತ್ತುವರಿಯಾಗಿರು ವುದು ಕಂಡು ಬಂದಿದೆ ಎಂದು ಜಿಲ್ಲಾ ಡಳಿತ ಸಬೂಬು ಹೇಳುತ್ತಿದೆ. ಇದು
ಅಂಕಿ అంಶ
82 ಎಕರೆ 24 ಗುಂಟೆ ಸಾರಕ್ಕಿ ಕೆರೆ ವಿಸ್ತೀರ್ಣ
33 ಎಕರೆ 24 ಗುಂಟೆ ಒತ್ತುವರಿ ಪ್ರಮಾಣ
13 ಜರಗನಹಳ್ಳಿಯಲ್ಲಿ ಒತ್ತುವರಿ
13 ಎಕರೆ ಸಾರಕ್ಕಿಯಲ್ಲಿ ಒತ್ತುವರಿ
ಬಿಬಿಎಂಪಿಯಿಂದ ಚರಂಡಿ ಕಾಮಗಾರಿ
ಜಿಲ್ಲಾಡಳಿತ ಒಂದೆಡೆ ಕಳೆದೊಂದು ವಾರದಿಂದ ಒತ್ತುವರಿ ತೆರವು ಪ್ರಕ್ರಿಯೆ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಬಿಎಂಪಿ ಕೆರೆ ಪಕ್ಕದಲ್ಲಿ ಚರಂಡಿ ಕಾಮಗಾರಿ ನಡೆಸಿದೆ. ಕೆರೆಯ ಒಂದು ದಿಕ್ಕಿನಲ್ಲಿ 500 ಅಡಿಗಳಷ್ಟು ಚರಂಡಿ ಯನ್ನು ಕೆಲವೇ ದಿನಗಳಲ್ಲಿ ನಿರ್ಮಿಸ ಲಾಗಿದೆ. ಆಸುಪಾಸಿನ ರಸ್ತೆಗಳಿಗೂ ಇತ್ತೀಚೆಗೆ ಡಾಂಬರೀಕರಣ ನಡೆಸ ಲಾಗಿದೆ. ಇದರ ಬಗ್ಗೆ ಸ್ಥಳೀಯರು
ಯಾವ ನ್ಯಾಯ’ ಎಂದು ಸ್ಥಳೀಯ ಮೋಹನ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
‘ನಾವು ಇಲ್ಲಿ 30 40 ವರ್ಷಗಳಿಂದ ನೆಲೆಸಿದ್ದೇವೆ. ಕೆರೆ ಒತ್ತುವರಿ ಮಾಡಿಲ್ಲ. ಖಾತಾ ಇದೆ. ಪ್ರತಿ ವರ್ಷ ಕಂದಾಯ
ಆಕ್ರೋಶ ವ್ಯಕ್ತಪಡಿಸಿದರು. ‘ಒತ್ತುವರಿಯಲ್ಲಿ ಹೆಚ್ಚಿನ ತಪ್ಪು ಆಗಿರುವುದು ಬಿಬಿಎಂಪಿಯಿಂದ. ಈಗ ಚರಂಡಿ ನಿರ್ಮಿಸುವ ಅಗತ್ಯ ಏನಿತ್ತು, ದುಡ್ಡು ಹೊಡೆಯಲೆಂದೇ ಈ ಕಾಮಗಾರಿ ನಡೆಸಲಾಗಿದೆ. ಈ ಸಲದ ಚುನಾವಣೆಯಲ್ಲಿ ಅಕ್ರಮದಲ್ಲಿ ಭಾಗಿಯಾದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ರಾಧಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟುತ್ತಿದ್ದೇವೆ. ಬಿಬಿಎಂಪಿ ರಸ್ತೆ ನಿರ್ಮಿಸಿ ಕೊಟ್ಟಿದೆ. ಬೆಸ್ಕಾಂ ವಿದ್ಯುತ್ ನೀಡುತ್ತಿದೆ. ಮನೆ ಅಕ್ರಮವಾಗಿದ್ದರೆ ಈ ಇಲಾಖೆಗಳು ಸೌಲಭ್ಯ ಒದಗಿಸಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು.
2 3 ಅಡಿ ಒತ್ತುವರಿಯಾಗಿರುವವರ ವಿರುದ್ಧ ಕಾರ್ಯಾಚರಣೆ ನಡೆಸಬಾರದು. ಮಾನವೀಯತೆಯಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದರು.
‘ಚಿತ್ತೂರಿನಲ್ಲಿದ್ದ ಜಾಗ ಮಾರಾಟ ಮಾಡಿ 20 ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿದ್ದೇವೆ. ಮನೆಯಲ್ಲಿರು ವುದು ನಾನು ಮತ್ತು ಪತಿ. ಈಗ ಏಕಾಏಕಿ ಕಟ್ಟಡ ಕಡವಿ ಹಾಕಿದ್ದಾರೆ. ಬೀದಿಗೆ ಬಿದ್ದಿದ್ದೇವೆ. ನಿಕ್ಕ ಮಳೆ ಸುರಿಯುತ್ತಿದೆ. ಎಲ್ಲಿಗೆ ಹೋಗುವುದು ಎಂದು ದಿಕ್ಕೇ ತೋಚದಂತಾಗಿದೆ’ ಎಂದು ವೃದ್ಧೆ ಲಕ್ಕಮ್ಮ ಕಣ್ಣೀರು ಸುರಿಸಿದರು.
‘ಈ ಹಿಂದೆ ಒತ್ತುವರಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ ಮಾಡಿದವರು ಸುಖವಾಗಿದ್ದಾರೆ. ಲಕ್ಷಾಂ ತರ ರೂಪಾಯಿ ಕೊಟ್ಟು ಜಾಗ ಖರೀದಿ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ಅಮಾಯಕರ ಮೇಲೆ ಪ್ರಹಾರ ನಡೆಸುತ್ತಿದೆ. ಕೆರೆ ಜಾಗಕ್ಕೆ ದಾಖಲೆ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಮೌನ ತಾಳಿರುವುದು ಏಕೆ’ ಎಂದು ನಿವಾಸಿ ನಾಗರಾಜ್ ಪ್ರಶ್ನಿಸಿದರು.
‘ಸಿವಿಲ್ ನ್ಯಾಯಾಲಯ ಮನೆ ತೆರವು ಮಾಡದಂತೆ ತಡೆಯಾಜ್ಞೆ ನೀಡಿದೆ. ಆದರೂ, ಜಿಲ್ಲಾಡಳಿತ ಕಾರ್ಯಾಚರಣೆ ಆರಂಭಿಸಿದೆ. ಇದು ಅನ್ಯಾಯದ ಪರಮಾ ವಧಿ’ ಎಂದು ಲತಾದೇವಿ ಆಕ್ರೋಶ ವ್ಯಕ್ತ ಪಡಿಸಿದರು. ಅವರ ಮನೆ ಮುಂದೆ ಕೋರ್ಟ್ ತಡೆಯಾಜ್ಞೆ ಇದೆ ಎಂಬ ಫಲಕವನ್ನೂ ಹಾಕಲಾಗಿತ್ತು.