ಬೆಂಗಳೂರಿನಲ್ಲಿ ಒಂದೇ ದಿನ 8500 ಕೋಟಿಯ ಭೂಮಿ ವಶ
- ಕೆರೆ, ಅರಣ್ಯ ಮತ್ತಿತರ ಅತಿಕ್ರಮ ವಿರುದ್ಧ ಭಾರೀ ಕಾರ್ಯಾಚರಣೆ
- ಒತ್ತುವರಿ ಆಗಿದ್ದ 750 ಎಕರೆ ಜಮೀನು ಮತ್ತೆ ಸರ್ಕಾರದ ವಶಕ್ಕೆ
ಬೆಂಗಳೂರು: ಹೈಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಜಿಲ್ಲಾಡಳಿತ ತೀವ್ರಗೊಳಿಸಿದ್ದು, ಶನಿವಾರ ಒಂದೇ ದಿನ8,451 ಕೋಟಿ ಮೌಲ್ಯದ 750.30 ಎಕರೆ ಒತ್ತುವರಿ ಕೆರವುಗೊಳಿಸಿದೆ.
‘ಇತ್ತೀಚೆಗೆ ಬೃಹತ್ ಕಾರ್ಯಾಚರಣೆ ಮೂಲಕ ಸುಮಾರು 3.13 ಎಕರೆ ಸಾರಕ್ಕಿ ಕೆರೆಯ ಒತ್ತುವರಿ ತೆರವುಗೊಳಿಸಿ 178 ಮನೆ, 7 ಅವಾರ್ಟ್ ಮೆಂಟ್, 18 ವಾಣಿಜ್ಯ ಕಟ್ಟಡಗಳನ್ನು ಕೆಡವಿದ ಬೆನ್ನಲ್ಲೇ, ಇದೀಗ 2ನೇ ಬೃಹತ್ ಕಾರ್ಯಾಚರಣೆ ಮುಂದುಮಸಿರುವ ಜಿಲ್ಲಾಡಳಿತ ಶನಿವಾರ ಬಾಣಸವಾಡಿ ಕೆರೆ ಕಾಡುಗೋಡಿ, ಆನೇಕಲ್‌ನ ವಿವಿಧ ಏಳು ಸ್ಥಳದಲ್ಲಿ 8,451 ಕೋಟಿ ಮೌಲ್ಯದ 750.30 ಎಕರೆ ಒತ್ತುವರಿ ಕೆರವುಗೊಳಿಸಿದೆ. ಇದರಲ್ಲಿ 700 ಎಕರೆಗೂ ಹೆಚ್ಚು ಅರಣ್ಯಭೂಮಿ ಇದೆ.
ಇದರೊಂದಿಗೆ ಬೆಂಗಳೂರು ನಗರ ಜಿಲ್ಲಾಡಳಿಶವು ಕೆಲವೇ ತಿಂಗಳ ಅವಧಿಯಲ್ಲಿ ಸುಮಾರು ? ನಾವಿರಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿದಂತಾಗಿದೆ.
ಜಿಲ್ಲಾಧಿಕಾರಿ ಶಂಕರ್ ನೇತೃತ್ವದಲ್ಲಿ ಶನಿವಾರಬೆಳಗ್ಗೆ ಬೆಂಗಳೂರು ಪೂರ್ವಕಾಲೂ ಕಿನ ಬಾಣಸವಾಡಿ ಕೆರೆ ಜಾಗದಲ್ಲಿ ನಿರ್ಮಿಸಿದ್ದ 100 ಕಟ್ಟಡಗಳನ್ನು ಕೆರವುಗೊಳಿಸಲಾಯಿತು. 42.38 ಎಕರೆ ವಿಸ್ತೀರ್ಣದ ಕೆರೆಯಲ್ಲಿ 1 7.26 ಎಕರೆ ಜಾಗ ಒತ್ತುಮಯಾಗಿತ್ತು. ವಿಶೇಷ ವೆಂದರೆ ಈ ಪೈಕಿ 14.27 ಎಕರೆ ಒತ್ತುವರಿ ಮಾಡಿದ್ದ ಬಿಡಿಎ, ಎಚ್‌ಆರ್‌ಬಿಆರ್ ಬಡಾವಣೆ ನಿರ್ಮಿಸಿ 222 ನಿವೇಶಗಳನ್ನು ಹಂಚಿಕೆ ಮಾಡಿದೆ.