ಬೆಂಗಳೂರು

ಸಾರಕ್ಕಿ ಕೆರೆ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡಗಳ ನೆಲಸಮ ಕಾರ್ಯ ಮುಂದುವರೆದಿದ್ದು, ಶುಕ್ರವಾರ 18 ಕಟ್ಟಡಗಳನ್ನು ತೆರವು ಮಾಡಲಾಗಿದೆ.

ಸಾರಕ್ಕಿ ಕೆರೆಯ ಅಂಗಳದಲ್ಲಿ ನಿರ್ಮಾಣ ಮಾಡಲಾಗಿರುವ ಅನಧಿಕೃತ ನಿರ್ಮಾಣಗಳನ್ನು ತೆರವು ಮಾಡಲು ಜೆಸಿಬಿ ಯಂತ್ರಗಳ ಮೂಲಕ ಸಂಜೆವರೆಗೆ ನಿರ್ಮಾಣವಾಗಿದ್ದ ಹಾಗೂ ನಿರ್ಮಾಣ ಹಂತದ ಕಟ್ಟಡಗಳನ್ನು ತೆರವು ಮಾಡಲಾಗಿದೆ.

  • ಶುಕ್ರವಾರವೂ ಮುಂದುವರಿದ ತೆರವು ಕಾರ್ಯ
  • ತೆರವು ಮಾಡದಂತೆ ಕೋರ್ಟಿನಿಂದ ತಡೆಯಾಜ್ಞೆ
  • ಒತ್ತುವರಿದಾರರಿಂದ ಕೆರೆ ಅಂಗಳ ರಕ್ಷಣೆ


ತೆರವು ಮಾಡುವ ಕಾರ್ಯ ನಡೆಯಿತು. ಈಗಾಗಲೇ ಸಾರಕ್ಕಿ ಗ್ರಾಮದ ವ್ಯಾಪ್ತಿಯಡಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲಾಗಿದ್ದು ಶುಕ್ರವಾರ ಜರಗನಹಳ್ಳಿ ಸರ್ವೆ ನಂ. 7ರಲ್ಲಿ ನಿರ್ಮಾಣ ಮಾಡಲಾಗಿದ್ದ 18 ಕಟ್ಟಡಗಳನ್ನು

ತೆರವಾದ ಮನೆಗಳಲ್ಲಿ ನೂತನವಾಗಿ ಮನೆಯೊಂದನ್ನು ನಿರ್ಮಾಣ ಮಾಡಿ 7 ತಿಂಗಳಾಗಿದ್ದು, ಅದನ್ನೂ ತೆರವು ಮಾಡಲಾಯಿತು. ಇದು ಮಾತ್ರವಲ್ಲದೆ, ಕೆಲವು ನಿರ್ಮಾಣ ಹಂತದಲ್ಲಿದ್ದವು ಅವನ್ನೂ ತೆರವು ಮಾಡಲಾಗಿದೆ.

30ರ ನಂತರ 10 ಕಟ್ಟಡ ತೆರವು

ಈ ಭಾಗದಲ್ಲಿ ನಿರ್ಮಾಣ ಮಾಡಲಾಗಿರುವ 10 ಮನೆಗಳವರು ಮನೆಗಳನ್ನು ತೆರವು ಮಾಡದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಕೆರೆ ಅಂಗಳದಲ್ಲಿ ಮನೆಗಳನ್ನು ನಿರ್ಮಿಸಿರುವ ಕುರಿತು ಹೈಕೋರ್ಟ್‌ಗೆ ಮನವರಿಕೆ ಮಾಡಿ ಏ.30ರೊಳಗೆ ತಡೆಯಾಜ್ಞೆ ತೆರವು ಮಾಡಿಸಿ ಮುಂದಿನ ತಿಂಗಳು ಈ 10 ಮನೆಗಳನ್ನೂ ತೆರವು ಮಾಡಿ ಕೆರೆ ಅಂಗಳವನ್ನು ರಕ್ಷಿಸಲಾಗುವುದು ಎಂದು ನಗರ ಜಿಲ್ಲಾಡಳಿತ ತಿಳಿಸಿದೆ.

280 ಕಟ್ಟಡಗಳ ತೆರವು

ಸಾರಕ್ಕಿ ಕೆರೆ ಆವರಣ 83 ಎಕರೆ ವ್ಯಾಪ್ತಿಯಲ್ಲಿ ಹರಡಿದ್ದು, ಇದರಲ್ಲಿ 34 ಎಕರೆ ಪ್ರದೇಶ ಒತ್ತುವರಿಯಾಗಿದ್ದು. ಸಾರಕ್ಕಿ ಗ್ರಾಮ, ಜರಗನಹಳ್ಳಿ ಹಾಗೂ ಪುಟ್ಟೇನಹಳ್ಳಿ ಗ್ರಾಮಗಳ ಸರ್ವೇ ನಂಬರ್‌ಗೆ ಈ ಕೆರೆ ವ್ಯಾಪ್ತಿ ಬರಲಿದೆ. ಈ ಮೂರು ಗ್ರಾಮಗಳ ಕಡೆಯಿಂದ ಇಷ್ಟು ಪ್ರಮಾಣದ ಒತ್ತುವರಿಯಾಗಿದ್ದು, ಇದನ್ನು ಕಳೆದ 10 ದಿನಗಳಿಂದ ತೆರವು ಮಾಡಲಾಗುತ್ತಿದ್ದು, ಈಗಾಗಲೇ ಸಾರಕ್ಕಿ, ಪುಟ್ಟೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಆಗಿದ್ದ ಒತ್ತುವರಿ ತೆರವಾಗಿದೆ. ಈಗ ಜರಗನಹಳ್ಳಿ ವ್ಯಾಪ್ತಿಯಲ್ಲಿ ತೆರವು ಕಾರ್ಯ ಮಾಡಲಾಯಿತು.

ಇಂದು ಅಲ್ಲಾಳಸಂದ್ರದಲ್ಲಿ ತೆರವು
ಕೆರೆ ಒತ್ತುವರಿ ತೆರುವ ಕಾರ್ಯವನ್ನು ಚುರುಕುಗೊಳಿಸಿರುವ ನಗರ ಜಿಲ್ಲಾಡಳಿತ రనివార యలవంక సమిండ ಅಲ್ಲಾಳಸಂದ್ರದ ಕೆರೆ ಒತ್ತುವರಿ ತೆರವು ಕಾರ್ಯ ಮಾಡಲಿವೆ. ಒಟ್ಟು 44 ಎಕರೆ ಪ್ರದೇಶ ಇರುವ ಅಲ್ಲಾಳಸಂದ್ರ ಕೆರೆಯಲ್ಲಿ 25 ಕೋಟಿ ರೂ. ಬೆಲೆ ಬಾಳುವ 1.5 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 50 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಗಳನ್ನು ಶನಿವಾರ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

Leave a Reply

Your email address will not be published. Required fields are marked *

4 × 3 =