ಪ್ರಜಾವಾಣಿ ವಾರ್ತೆ

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕಾಚಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿದ್ಯಾಮಂದಿರ ಶಾಲೆ ಮಾಡಿದ್ದ 1.20 ಎಕರೆ ಒತ್ತುವರಿ ಯನ್ನು ಶುಕ್ರವಾರ ತೆರವು ಮಾಡಲಾಯಿತು.

ಗ್ರಾಮದ ಸರ್ವೆ ಸಂಖ್ಯೆ 28ರಲ್ಲಿ 1 ಎಕರೆ 38 ಗುಂಟೆ ಸರ್ಕಾರಿ ಜಮೀನು ಇದೆ ಇದರಲ್ಲಿ 1 ಎಕರೆ 20 ಗುಂಟೆ ಜಮೀನನ್ನು ಶಾಲೆಯವರು ಆರು ವರ್ಷಗಳ ಹಿಂದೆ ಒತ್ತುವರಿ ಮಾಡಿ ದ್ದರು. ಈ ಜಮೀನನ್ನು ರಸ್ತೆಗಾಗಿ ಹಾಗೂ ವಾಹನ ನಿಲುಗಡೆಗಾಗಿ ಬಳಸಿಕೊಳ್ಳಲಾಗುತ್ತಿತ್ತು.

ತೆರವು ಕಾರ್ಯಾಚರಣೆಗೆ ವಿದ್ಯಾ ಮಂದಿರ ಟ್ರಸ್ಟ್ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದರು. ಪೊಲೀಸ್ ಬಂದೋಬಸ್ತ್ನಲ್ಲಿ ತೆರವು ನಡೆಸಲಾ ಯಿತು. ಸಮೀಪದಲ್ಲಿ 20 ಗುಂಟೆ ಜಮೀನನ್ನು ಕೃಷ್ಣ ರೆಡ್ಡಿ ಎಂಬವರು ಒತ್ತುವರಿ ಮಾಡಿದ್ದರು. ಅದನ್ನು ಸಹ ತೆರವು ಮಾಡಲಾಗಿದೆ.

ಬೈಯಪ್ಪನಹಳ್ಳಿಯಲ್ಲಿ ಸರ್ವೆ ಸಂಖ್ಯೆ 8ರಲ್ಲಿ 31 ಎಕರೆ 27 ಗುಂಟೆ ಕೆರೆ ಅಂಗಳದ ಜಮೀನಿನ ಪೈಕಿ ಲೋಕೇಶ ಬಿನ್ ಚಿಕ್ಕಣ್ಣ ಹಾಗೂ ಅಪ್ಪಯ್ಯ ಎಂಬ ವರು 2 ಎಕರೆ 21 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದರು. ಕಮ್ಮಸಂದ್ರದಲ್ಲಿ ಸರ್ವೆ ಸಂಖ್ಯೆ 34ರಲ್ಲಿ ನಾಗರಾಜ್ ಬಿನ್ ಸುಬ್ಬಯ್ಯ 1 ಎಕರೆ 20 ಗುಂಟೆ, ಚಿಕ್ಕಣ್ಣ ಬಿ.ಎಂ.ಮುನಿಶಾಮಣ್ಣ 25 ಗುಂಟೆ, ಎರಡು, ಮುನಿಯಪ್ಪ 25 ಗುಂಟೆ ಒತ್ತುವರಿ ಮಾಡಿದ್ದರು. ಇವುಗಳನ್ನೂ ತೆರವು ಮಾಡಲಾಯಿತು.

ತಹಶೀಲ್ದಾ‌ರ್ ಡಾ.ಬಿ.ಆರ್. ಹರೀಶ್ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6 ಎಕರೆ 21 ಗುಂಟೆ ಜಮೀನಿನ ಒತ್ತುವರಿ ತೆರವು ಮಾಡಲಾಗಿದೆ. ವಶಪಡಿಸಿಕೊಂಡ ಜಮೀನಿನ ಮೌಲ್ಯ ₹18 ಕೋಟಿ

ಕಾಚಮಾರನಹಳ್ಳಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿದ್ಯಾಮಂದಿರ ಶಾಲೆಯವರು ಮಾಡಿದ್ದ ಒತ್ತುವರಿಯನ್ನು ಶುಕ್ರವಾರ ತೆರವು ಮಾಡಲಾಯಿತು

11 ಎಕರೆ ತೆರವು

ಯಲಹಂಕ, ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಸಿಂಗಹಳ್ಳಿ ಗ್ರಾಮದ ಸರ್ವೆ ನಂ.6/328ರಲ್ಲಿ ಎ ಅಲ್ಬರ್ಟ್ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 8 ಎಕರೆ ಜಮೀನಿನ ಒತ್ತುವರಿಯನ್ನು ಜಿಲ್ಲಾಡಳಿತ ತೆರವು ಮಾಡಿದೆ.

ಜಾಲಾ ಹೋಬಳಿ ತಿಮ್ಮಸಂದ್ರ ಗ್ರಾಮದ ಸರ್ವೆ ನಂ.91ರಲ್ಲಿ ಕೆ.ನಾರಾಯಣಪ್ಪ ಮತ್ತು ಕೃಷ್ಣಪ್ಪ ಎಂಬುವವರು ಒತ್ತುವರಿ ಮಾಡಿದ್ದ 3 ಎಕರೆ ಜಮೀನನ್ನು ತೆರವುಗೊಳಿಸಲಾಯಿತು. ಒತ್ತುವರಿ ಮಾಡಿಕೊಂಡಿರುವ ಜಾಗವು ಸರ್ಕಾರಿ ಗೋಮಾಳ

ಜಮೀನಾಗಿದ್ದು, ಒತ್ತುವರಿದಾರರು ಅಕ್ರಮವಾಗಿ ಖಾತೆಗಳನ್ನು ಮಾಡಿಸಿಕೊಂಡಿದ್ದರು. ಈ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಅಕ್ರಮ ಖಾತೆಗಳನ್ನು ರದ್ದುಗೊಳಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳು ನೀಡಿದ್ದ ಆದೇಶದ ಮೇರೆಗೆ ಒತ್ತುವರಿಯನ್ನು ತೆರವುಗೊಳಿಸಿ, ₹30 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ಉತ್ತರ ತಾಲ್ಲೂಕು (ಹೆಚ್ಚುವರಿ) ತಹಶೀಲ್ದಾರ್ ಬಾಳಪ್ಪ ಹಂದಿಗುಂದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

five × four =