ಸಾರಕ್ಕಿ ಕೆರೆ ಪ್ರದೇಶದಲ್ಲಿ ಗುರುವಾರ ನೂರಾರು ಕಟ್ಟಡಗಳು ನೆಲಸಮವಾದವು. ಜೆಸಿಬಿ, ಹಿಟಾಚಿಗಳು ಆರ್ಭಟಿಸಿದ ನೋಟ.

ಸಾರಕ್ಕಿ ಕೆರೆ ಒತ್ತುವರಿ ತೆರವು

ವಿಕ ಸುದ್ದಿಲೋಕ ಬೆಂಗಳೂರು

ಬೆಂಗಳೂರಿನ 82 ಎಕರೆ ವಿಸ್ತೀರ್ಣದ ಸಾರಕ್ಕೆ ಕೆರೆಯ ಒತ್ತುವರಿದಾರರಿಗೆ ಬಿಸಿ ಮುಟ್ಟಿಸಿರುವ ಜಿಲ್ಲಾಡಳಿತವು, ಅಂದಾಜು 2,000 ಕೋಟಿ ರೂ. ಮೌಲ್ಯದ ಭೂಮಿಯನ್ನು ಗುರುವಾರ ವಶಕ್ಕೆ ಪಡೆಯಿತು.

ಜೆ.ಪಿ.ನಗರ ಬಳಿಯ ಸಾರಕ್ಕಿ ಕೆರೆಯು 82.24 ಎಕರೆ ವಿಸ್ತೀರ್ಣವಿದ್ದು, ಈ ಪೈಕಿ 33.15 ಎಕರೆಯನ್ನು ಭೂಗಳ್ಳರು ಕಬಳಿಸಿದ್ದರು. ನಗರ ಜಿಲ್ಲಾಧಿಕಾರಿ ವಿ.ಶಂಕರ್ ಮಾರ್ಗ ದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದ 178 ವಸತಿ ಮನೆಗಳು. ಏಳು ಅಪಾಟ್ ್ರಮೆಂಟ್, 18 ವಾಣಿಜ್ಯ ಮಳಿಗೆಗಳು ಸೇರಿದಂತೆ ಹಲವಾರು ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು. ಇಷ್ಟು ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿದ್ದು ಇದೇ ಮೊದಲು. ಸಾರಕ್ಕಿಯಲ್ಲಿ ಪ್ರತಿ ಚದರ ಅಡಿಗೆ 10 ರಿಂದ 15 ಸಾವಿರ ರೂ. ಬೆಲೆ ಇದೆ. ಹಾಗಾಗಿ, ಕೆರೆ ಅಂಗಳದ ಮೇಲೆ ಕಣ್ಣು ಹಾಕಿದ್ದ

ಕೆರೆಯ ಮೂಲ ಒತ್ತುವರಿದಾರರ ಮಾಹಿತಿ ಕಲೆ ಹಾಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗು ವುದು. ಸರಕಾರಿ ಜಮೀನಿಗೆ ಖಾತೆ ಮಾಡಿಕೊಟ್ಟು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು.

-ವಿ ಶಂಕರ್ ಬೆಂಗಳೂರು ನಗರ ಜಿಲ್ಲಾಧಿಕಾರಿ

ಎರಡು ಸಾವಿರ ಕೋಟಿ ರೂ. ಮೌಲ್ಯದ ಭೂಮಿ ಸ್ವಾಧೀನ

  • 82.24 ಕೆರೆ ಜಾಗದಲ್ಲಿ 33.15 ಎಕರೆ ಕಬಳಿಕೆ
  • 178 ಮನೆಗಳು, 7 ಅಪಾರ್ಟ್‌ಮೆಂಟ್ ಧರೆಗೆ
  • 18 ವಾಣಿಜ್ಯ ಮಳಿಗೆಗಳು ನೆಲಸಮ
  • ತೆರವು ಕಾರ್ಯಾಚರಣೆ ಪ್ರೋಣ್‌ನಿಂದ ಚಿತ್ರೀಕರಣ

 

ಮತ್ತಷ್ಟು ವರದಿ: ನಮ್ಮ ಬೆಂಗಳೂರು

ಭೂಗಳ್ಳರು, ಅರ್ಧ ಕೆರೆಯನ್ನೇ ನುಂಗಿ ಹಾಕಿದ್ದರು. 15 ಜೆಸಿಬಿ ಯಂತ್ರ, 3 ಹಿಟಾಚಿ ಯಂತ್ರಗಳ ನೆರವಿನಿಂದ ನೂರಾರು ಮನೆಗಳನ್ನು ಧ್ವಂಸಗೊಳಿಸಲಾಯಿತು.

30 ವರ್ಷಗಳ ಹಿಂದೆಯೇ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿದ್ದವು. ಸಿವಿಲ್ ನ್ಯಾಯಾಲಯ ದಿಂದ ತೆರವಿಗೆ ತಡೆಯಾಜ್ಞೆತರಲಾಗಿದೆ. ಆದರೂ ಅಧಿ ಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

-ಲತಾದೇವಿ ಮನೆ ಕಳೆದುಕೊಂಡವರು

Leave a Reply

Your email address will not be published. Required fields are marked *

nine + 1 =