ಕನ್ನಡಪ್ರಭ ವಾರ್ತೆ, ಬೆಂಗಳೂರು

ಕರೆ ಒತ್ತುವರಿಯಿಂದ ನೆಲೆ ಕಳೆದುಕೊಂಡವರಿಗೆ ಪರ್ಯಾಯವಾಗಿ ಮನೆ ನೀಡಲು ಅರ್ಹರ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸುತ್ತಿದೆ.

ಅರ್ಹರ ಪಟ್ಟಿ ಸಿದ್ಧವಾಗಿದ್ದರೂ, ನೈಜ ಅರ್ಹರು ಯಾರೆಂಬ ಸ್ಪಷ್ಟ ಮಾಹಿತಿ ಕಲೆಹಾಕಬೇಕಿದೆ. ಹೀಗಾಗಿ ಮತ್ತೊಮ್ಮೆ ನಿರ್ವಸಿತರ ಬಗ್ಗೆ ಮಾಹಿತಿ ಕಲೆ ಹಾಕಿ ಅಂತಿಮ ಪಟ್ಟಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಲಿದೆ. ಕಳೆದ ತಿಂಗಳು ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿಯ ಕಾರ್ಯಾ ಚರಣೆಯಲ್ಲಿ 150 ಮಂದಿ ಮನೆ ಕಳೆದು ಕೊಂಡಿದ್ದು, ಇದರಲ್ಲಿ ಅರ್ಹರ ಪಟ್ಟಿ ತಯಾರಿಸಲು ಮುಖ್ಯಮಂತ್ರಿ ಸಿದ್ದರಾ ಮಯ್ಯ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ವಳಗೇರಹಳ್ಳಿ, ಗುಂಜೂರು ಹಾಗೂ ಆಲೂರು ಗ್ರಾಮದಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಂಕೀರ್ಣದಲ್ಲಿ ಮನೆಗಳನ್ನು ನೀಡಲು ಸರ್ಕಾರ ನಿರ್ಧರಿಸಿದ್ದು, ಅರ್ಹರಿಗೆ ಮಾತ್ರ ಉಚಿತವಾಗಿ ನೀಡಲಿದೆ.

‘ಒತ್ತುವರಿ ತೆರವು ಮಾಡದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಿತ್ತು. ನ್ಯಾಯಾಂಗದ ಆದೇಶದಂತೆ ಕ್ರಮ ಕೈಗೊಂಡಿದ್ದು, ಯಾರನ್ನೂ ರಕ್ಷಿಸುವ ತಪ್ಪು ಮಾಡಿಲ್ಲ. ಕೆಲವರು ಕೆರೆ ಅಂಗಳದಲ್ಲಿ ಮನೆ ಕಳೆದುಕೊಂಡಿದ್ದೇವೆ ಎಂದು ತಪ್ಪು ಮಾಹಿತಿ ನೀಡಿ ಅವಕಾಶ ದುರುಪಯೋಗದ ಡಿಸಿಕೊಳ್ಳುವ ಅಪಾಯವಿದೆ. ಹೀಗಾಗಿ ಮನೆ ಕಳೆದುಕೊಂಡ ಬಡವರನ್ನು ಪತ್ತೆ ಮಾಡಿ ಸಮಗ್ರ ಮಾಹಿತಿ ಕಲೆ ಹಾಕಲಾಗುವುದು. ನಂತರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾ ಗುವುದು, ಹೈಕೋರ್ಟ್ ಆದೇಶದಂತೆ ಕೆರೆ

ಒತ್ತುವರಿ ತೆರವು

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ನಡುವೆ ಇರುವ ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ ನೀರು ಸರಾಗವಾಗಿ ಹರಿಯದೆ ಬೆಳ್ಳಂದೂರು ಹತ್ತಿರದ ಯಮಲೂರು ಹಾಗೂ ವರ್ತೂರು ಕೆರೆ ಬಳಿ ನೊರೆಯಾಗಿ ರಸ್ತೆ ಮಟ್ಟಕ್ಕೆ ಹರಿಯುತ್ತಿದೆ. ಬೆಳ್ಳಂದೂರು ಕೆರೆಯಿಂದ ಆರಂಭವಾಗಿ ವರ್ತೂರು ಕೆರೆಯ ನಡುವೆ 66 ಅಡಿ ಅಗಲದ ರಾಜಕಾಲುವೆ ಇರಬೇಕು. ಆದರೆ ಕೆಲವು ಕಡೆ 30 ಅಡಿ, ಇನ್ನೂ ಕೆಲವೆಡೆ 10 ಅಡಿ ರಾಜಕಾಲುವೆ ಕಂಡುಬಂದಿದೆ. ಮತ್ತೆ ಕೆಲವು ಸ್ಥಳಗಳಲ್ಲಿ ರಾಜಕಾಲುವೆಯೇ ಕಂಡುಬರುತ್ತಿಲ್ಲ, ಶನಿವಾರ 1 ಕಿ.ಮೀ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಸೋಮವಾರ ಉಳಿದ ಒತ್ತುವರಿಯನ್ನು ತೆರವು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಶಂಕರ್ ತಿಳಿಸಿದರು.

ಒತ್ತುವರಿ ತೆರವು ಮಾಡಿದ್ದು, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಬಡವ-ಶ್ರೀಮಂತ ಎಂಬ ತಾರತಮ್ಯವಿಲ್ಲದೆ ಕಾರ್ಯಾಚರಣೆ ನಡೆಸಲಾಗಿದೆ. ಈಗ ಮನೆಗಳನ್ನು ನೀಡಲು ಸರ್ಕಾರವೇ ನಿರ್ಧರಿಸಿದ್ದು, ಶೀಘ್ರದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಧಿಕಾರಿ ವಿ.ಶಂಕ‌ರ್ ತಿಳಿಸಿದರು.

Leave a Reply

Your email address will not be published. Required fields are marked *

6 − 4 =