ವಿಕ ಸುದ್ದಿಲೋಕ ಬೆಂಗಳೂರು

ದಿವಂಗತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಜಾಗದ ವಿವಾದವು ಕೊನೆಗೂ ಬಗೆಹರಿದಿದೆ. ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ನೀಡಲು ಅಭಿಮಾನ್ ಸ್ಟುಡಿಯೊ ಮಾಲೀಕರು ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ. ಆ ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಜಿಲ್ಲಾಧಿಕಾರಿ ವಿ.ಶಂಕರ್,”ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಮೈಲಸಂದ್ರ ಗ್ರಾಮದ ಸರ್ವೆ ನಂ. 68ರಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,” ಎಂದು ತಿಳಿಸಿದರು.

“ವಿಷ್ಣುವರ್ಧನ್‌ರವರ ಸಮಾಧಿಯನ್ನೊಳಗೊಂಡ ಸ್ಥಳವನ್ನೇ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಈ ಜಾಗವು ಅಭಿಮಾನ್ ಸ್ಟುಡಿಯೊಗೆ ಸೇರಿದ್ದಾಗಿದೆ. ವಿಷ್ಣುವರ್ಧನ್ ಸ್ಮಾರಕಕ್ಕೆ 2ಎಕರೆ ನೀಡಲು ನಟ ಬಾಲಕೃಷ್ಣರವರ ಮಕ್ಕಳು ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರೊಂದಿಗೂ ಚರ್ಚೆ ನಡೆಸಿದ್ದು, ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ,” ಎಂದರು.

“ಈ ಹಿಂದೆ ಮೈಲಸಂದ್ರ ಗ್ರಾಮದಲ್ಲಿ 2ಎಕರೆ ನೀಡಗಿತ್ತು. సిఎం ಸಿದ್ದರಾಮಯ್ಯ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನೂ ನೆರವೇರಿ ಸಿದ್ದರು. ಸ್ಮಾರಕ ಜಾಗದ ಬಗ್ಗೆ ಕೆಲವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾ ಲಯವು ಜಮೀನು ಹಿಂಪಡೆಯುವಂತೆ ಆದೇಶಿಸಿದಾಗ ಸಮಸ್ಯೆ ತಲೆದೋರಿತ್ತು,” ಎಂದು ತಿಳಿಸಿದರು.

“1970ರಲ್ಲಿ ಅಭಿಮಾನ್ ಸ್ಟುಡಿಯೊ ನಿರ್ಮಾಣಕ್ಕೆ ನಟ ಬಾಲಕೃಷ್ಣ ಅವರಿಗೆ ಸರಕಾರ 20 ಎಕರೆ ಜಮೀನನ್ನು ಮಂಜೂರು ಮಾಡಿತ್ತು. ನಟ ಬಾಲಕೃಷ್ಣ ಅವರ ಪುತ್ರರು 2004-05ರಲ್ಲಿ 20 ಎಕರೆ ಪೈಕಿ 10 ಎಕರೆಯನ್ನು ಮಾರಾಟ ಮಾಡಿದ್ದರು. ಸರಕಾರವು ಜಮೀನು ಮಾರಾಟ ಮಾಡಿದ ಹಣದಲ್ಲಿ ಸ್ಟುಡಿಯೊ ಅಭಿವೃದ್ಧಿಪಡಿಸಬೇಕೆಂದು ಷರತ್ತು ವಿಧಿಸಿ, ಅನುಮತಿ ನೀಡಿತ್ತು. ಆದರೆ, ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಹಿನ್ನೆಲೆಯಲ್ಲಿ ಜಮೀನು ಹಿಂಪಡೆಯುವು ದಾಗಿ ನೋಟಿಸ್ ನೀಡಿತ್ತು,” ಎಂದು ವಿವರಿಸಿದರು.

Leave a Reply

Your email address will not be published. Required fields are marked *

four − 2 =