ಅಕ್ರಮ ನಿವೇಶನ ಖರೀದಿಸದಂತೆ ಡಿಸಿ ಎಚ್ಚರಿಕೆ

ವಿಕ ಸುದ್ದಿಲೋಕ ಬೆಂಗಳೂರು ಡೆವಲಪರ್‌ಗಳು ಸರಕಾರಿ ಜಮೀನು ಒತ್ತುವರಿ ಮಾಡಿ ಹಾಗೂ ಹಸಿರು ವಲಯದ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ನಿವೇಶನ ಖರೀದಿಗೆ ಮುನ್ನ ಎಚ್ಚರ ವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಆನೇಕಲ್, ದಾಸನಪುರ, ಹೆಸರಘಟ್ಟ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ಸಂಖ್ಯೆ ಜಾಸ್ತಿ ಇದೆ. ಆನೇಕಲ್ ತಾಲ್ಲೂಕಿನಲ್ಲಿ ಸಾಯಿ ಡೆವೆಲಪರ್‌ನವರು ಸರಕಾರಿ ಮತ್ತು ಹಸಿರು ವಲಯದ ಜಮೀನಿನಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿ, ನೂರಾರು ಮಂದಿಗೆ ನಿವೇಶನಗಳನ್ನು ಮಾರಾಟ ಮಾಡಿ ವಂಚಿಸಿದ್ದಾರೆ. ಈ ಡವಲವರ್‌ನ ಮಾಲೀಕರು ಕೆ.ಪ್ರಭಾಕರ ರೆಡ್ಡಿ ಎಂಬುದು ತಿಳಿದುಬಂದಿದೆ,” ಎಂದು ಹೇಳಿದರು.

“ಬಡಾವಣೆ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಲಾಗಿದೆಯೇ? ಭೂ ಪರಿವರ್ತಿತ ಜಾಗದಲ್ಲಷ್ಟೇ ಬಡಾವಣೆ ನಿರ್ಮಿಸಲಾಗಿದೆಯೇ ಎಂಬುದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಆ ಬಳಿಕ ಸಾರ್ವಜನಿಕರು ನಿವೇಶನಗಳನ್ನು ಖರೀದಿಸುವುದು ಉತ್ತಮ,” ಎಂದು ಸಲಹೆ

ನೀಡಿದರು. ”ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಗುವುದು,” ಎಂದು ಹೇಳಿದರು. ಅಕ್ರಮವಾಗಿ ಬಡಾವಣೆಗಳನ್ನು ಗುರುತಿಸಿ ತಿಂಗಳೊಳಗೆ ವರದಿ ನೀಡುವಂತೆ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾ‌ರಗಳಿಗೆ ಸೂಚಿಸಲಾಗಿದೆ. ಐದು ತಾಲ್ಲೂಕಿನ ತಹಶೀಲ್ದಾರ್ಗಳು ವರದಿ ನೀಡಿದ ಬಳಿಕ ಕರ್ನಾಟಕ ಭೂ ಕಂದಾಯ ಕಾಯಿದೆ ಸೆಕ್ಷನ್ 96ರ ಪ್ರಕಾರ ಅಕ್ರಮ ಬಡಾವಣೆಗಳ ಜಾಗವನ್ನು ಸರಕಾರದ ವಶಕ್ಕೆ ಪಡೆಯಲಾ

“ಹಸಿರು ವಲಯ ಅಥವಾ ಕೃಷಿ ಉದ್ದೇಶದ ಜಮೀನಿನಲ್ಲಿ ಬಡಾವಣೆ ನಿರ್ಮಿಸುವುದು ಅಕ್ರಮ. ಬಡಾವಣೆ ನಿರ್ಮಾಣಕ್ಕೆ ಮುನ್ನ ಭೂ ಪರಿವರ್ತನೆ ಮಾಡಿಸಬೇಕು. ಜತೆಗೆ ಬಿಡಿಎ, ಬಿಎಂಆರ್‌ಡಿಎ ಅಥವಾ ಸ್ಥಳೀಯ ಪ್ರಾಧಿ ಕಾರಗಳಿಂದ ಅನುಮೋದನೆ ಪಡೆದುಕೊಳ್ಳಬೇಕು. ಆದರೆ, ಈ ನಿಯಮಗಳೆಲ್ಲವನ್ನು ಉಲ್ಲಂಘಿಸಿ ಬಡಾವಣೆಗಳಿಗೆ ನಿರ್ಮಿಸಿ, ಮಾರಾಟ ಮಾಡಲಾ ಗುತ್ತಿದೆ. ಜನರು ಬಡಾವಣೆಯ ಪೂರ್ವಾಪರ ತಿಳಿಯದ ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ,” ಎಂದು ತಿಳಿಸಿದರು.

“ಡೆವೆಲಪರ್‌ಗಳು ಕೆರೆ ಮತ್ತು ಕೆರೆ ಪ್ರದೇಶ ದಲ್ಲಿ ಬಡಾವಣೆಗಳನ್ನು ನಿರ್ಮಿಸಿ, ಮಾರಾಟ ಮಾಡುತ್ತಿದ್ದಾರೆ. ‘ಬಿ’ ಖರಾಬು ಎಂದು ಗುರುತಿಸಲ್ಪಟ್ಟಿರುವ ಬೆಟ್ಟ-ಗುಡ್ಡ ಕಾಲುವೆ, ಹಳ್ಳಗಳಲ್ಲಿ ಬಡಾವಣೆಗಳು ತಲೆ ಎತ್ತಿವೆ.

101 ಎಕರೆಯಲ್ಲಿ ಅಕ್ರಮ ಬಡಾವಣೆ

ಕೆ.ಪ್ರಭಾಕರ ರೆಡ್ಡಿ ಒಡೆತನದ ಸಾಯಿ ಡೆವಲಪರ್ಸ್ ಆನೇಕಲ್ ತಾಲ್ಲೂಕಿನ ಹೊಮ್ಮದೇವನಹಳ್ಳಿಯಲ್ಲಿ 101 ಎಕರೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಬಡಾವಣೆಯನ್ನು ಜಿಲ್ಲಾಡಳಿತದಿಂದ ತೆರವುಗೊಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಮಾಹಿತಿ ನೀಡಿದರು. ”101 ಎಕರೆಯಲ್ಲಿ ಬಡಾವಣೆ ನಿರ್ಮಿಸಿ, ಮಾರಾಟ ಮಾಡಲಾಗಿದೆ. ಡಿ. 3ರಂದು ತೆರವು ಕಾರ್ಯಾಚರಣೆ ಕೈಗೊಂಡು 250 ಕೋಟಿ ರೂ. ಮೌಲ್ಯದ ಭೂಮಿ ವಶಪಡಿಸಿಕೊಳ್ಳಲಾಗಿದೆ,” ಎಂದು ತಿಳಿಸಿದರು.

”ಸರಕಾರಿ ಜಮೀನು ಮಂಜೂರು ಮಾಡಿಸಿಕೊಂಡಿದ್ದ ಸುಮಾರು 10 ಮಂದಿ ರೈತರಿಂದ ಜಿಪಿಎ ಮಾಡಿಸಿಕೊಂಡಿದ್ದಾರೆ. ಇದಲ್ಲದೇ ಈ ಜಮೀನಿನ ಪಕ್ಕದಲ್ಲಿದ್ದ ಇತರ ರೈತರ ಜಮೀನನ್ನು ಕಬಳಿಸಲಾಗಿದೆ. ಸರಕಾರದಿಂದ ಮಂಜೂರಾದ ಜಮೀನಿನ ಪೋಡಿ ಆಗಿಲ್ಲ. ಅಲ್ಲದೇ ಗಡಿಯನ್ನು ಗುರುತಿಸಿಲ್ಲ. ಆದರೂ, ರೈತರಿಂದ ಜಿಪಿಎ ಮಾಡಿಸಿಕೊಂಡು ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗಿದೆ,” ಎಂದು ಹೇಳಿದರು.

“ಈ ಹಿಂದೆಯೇ ಸುಬ್ಬರಾವ್ ಎಂಬುವರು 12 ಎಕರೆಯಲ್ಲಿ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿದ್ದರು. ಆ ಬಳಿಕ ಸಾಯಿ ಡೆವಲಪರ್ಸ್ ಗೆ ಮಾರಾಟ ಮಾಡಲಾಗಿದೆ. ಆನಂತರ ಸಾಯಿ ಡೆವಲಪರ್ಸ್ ಒಟ್ಟು 101 ಎಕರೆಯಲ್ಲಿ ಬಡಾವಣೆ ನಿರ್ಮಿಸಿದೆ. ಈ ಸಂಬಂಧ ನಿವೇಶನ ಖರೀದಿದಾರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳೀಯ ರೈತರು ಸಹ ದೂರು ನೀಡಿದ್ದಾರೆ,” ಎಂದು ತಿಳಿಸಿದರು.

”ಇಲ್ಲಿ ಸರಕಾರಿ ಜಾಗದಲ್ಲಿದೆ ಎಂಬುದೇ ಪತ್ತೆ ಆಗುತ್ತಿಲ್ಲ ಹಾಗಾಗಿ, ಸರ್ವೇ ನಡೆಸಿ, ಬಡಾವಣೆಯ ಜಾಗವನ್ನು ವಶಪಡಿಸಿಕೊಳ್ಳಲಾಗುವುದು. ಬಡಾವಣೆಯಲ್ಲಿನ ರಸ್ತೆಗಳಲ್ಲಿ ಡಾಂಬರು ಹಾಕಲಾಗಿದೆ. ಅಲ್ಲಲ್ಲಿ ಮನೆಗಳು ಸಹ ತಲೆ ಎತ್ತಿವೆ. ಹೀಗೆ ಅಕ್ರಮವಾಗಿ ನಿರ್ಮಿಸಲಾದ ಬಡಾವಣೆಯಲ್ಲಿ ಕಡಿಮೆ ದರಕ್ಕೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಹಾಗಾಗಿ, ಜನರು ಬಡಾವಣೆಯ ಪೂರ್ವಾಪರ ಪರಿಶೀಲಿಸದೆಯೇ, ನಿವೇಶನಗಳನ್ನು ಖರೀದಿ ಮಾಡಿ ಮೋಸ ಹೋಗಿದ್ದಾರೆ. ತಹಶೀಲ್ದಾರ್ ಹಾಗೂ ನಿವೇಶನ ಖರೀದಿಸಿ ವಂಚನೆ ಒಳಗಾದವರು ಕೆ.ಪ್ರಭಾಕರ ರೆಡ್ಡಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ,” ಎಂದು ಹೇಳಿದರು.

“ಇದಲ್ಲದೇ ಆಗಸ ತಿಮ್ಮನಹಳ್ಳಿಯಲ್ಲಿ 18 ಎಕರೆ ಸರಕಾರಿ ಜಮೀನಿನಲ್ಲಿ ಬಡಾವಣೆ ನಿರ್ಮಿಸಿರುವುದು ತಿಳಿದುಬಂದಿದೆ. ಇಲ್ಲಿ ಸಾಯಿ ಇಂಟರ್‌ನ್ಯಾಷನಲ್ ಶಾಲೆಯನ್ನು ಸಹಕಟ್ಟಲಾಗಿದೆ. ರೈತರಿಗೆ ತಿಳಿಯದಂತೆಯೇ ಜಮೀನುಕಬಳಿಸಿ, ಬಡಾವಣೆ ನಿರ್ಮಾಣ ಮಾಡಲಾಗಿದೆ. ಹಾಗೆಯೇ ಎಸ್.ಬಿಂಗೀಪುರದಲ್ಲಿ 7.20 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಇದು ನ್ಯಾಯಾಲಯದ ವಿಚಾರಣೆಯಲ್ಲಿದೆ,” ಎಂದು ವಿವರಿಸಿದರು.

Leave a Reply

Your email address will not be published. Required fields are marked *

one × one =